ಭಾನುವಾರ, ಸೆಪ್ಟೆಂಬರ್ 26, 2021
27 °C

ಎಸ್‍ಪಿ-ಬಿಎಸ್‌ಪಿಗೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ:ವರುಣ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಮಾಜವಾದಿ ಪಕ್ಷ -ಬಿಎಸ್‌ಪಿ ಮೈತ್ರಿಕೂಟಕ್ಕೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ ಎಂದು ಬಿಜೆಪಿ ನಾಯಕ, ಪಿಲಿಭಿತ್ ಚುನಾವಣಾ ಕ್ಷೇತ್ರದ ಅಭ್ಯರ್ಥಿ  ವರುಣ್ ಗಾಂಧಿ ಹೇಳಿದ್ದಾರೆ.

ನೀವು ಭಾರತಮಾತೆ ಜತೆಗಿದ್ದೀರಾ? ಅಥವಾ ಪಾಕಿಸ್ತಾನದ ಜತೆಗಿದ್ದೀರಾ? ನೀವು ಆ ಮೈತ್ರಿಕೂಟಕ್ಕೆ ಮತ ನೀಡಿದರೆ ಅದು ಪಾಕಿಸ್ತಾನಕ್ಕೆ ಮತ ನೀಡಿದಂತೆ ಎಂದಿದ್ದಾರೆ ವರುಣ್ ಗಾಂಧಿ.

ಅಮ್ಮ ಮೇನಕಾ ಗಾಂಧಿ ಅವರ ಚುನಾವಣಾ ಕ್ಷೇತ್ರ ಸುಲ್ತಾನ್‌ಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ವರುಣ್ ಗಾಂಧಿ ಈ ರೀತಿ ಹೇಳಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ವರುಣ್, ಈ ಬಾರಿ ನೀವು  ಭಾರತ ಮಾತೆಗೆ ಮತ ನೀಡಬೇಕು. ನನ್ನ  ಅಮ್ಮ  ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಅವರು ಒಳ್ಳೆಯ ವ್ಯಕ್ತಿ, ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು, ಆಕೆ  ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಕಳೆದ 35 ವರ್ಷಗಳಲ್ಲಿ ಅವಳ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ಕೇಳಿ ಬಂದಿಲ್ಲ.  ಆದರೆ ನಾನು ಭಾರತಮಾತೆಯ ಪರವಾಗಿ ಮತಯಾಚನೆಗೆ ಬಂದಿದ್ದೇನೆಯೇ ಹೊರತು ಅಮ್ಮನ ಪರವಾಗಿ ಅಲ್ಲ,. ನೀವು ಭಾರತಮಾತೆಯ ಪರವಾಗಿ ಮತನೀಡಲು ಸಿದ್ಧರಿದ್ದೀರಾ? ಎಂದು ಕೇಳಿದಾಗ ಸಭಿಕರು, ನಾವು ಸಿದ್ಧ ಎಂದು ಕೂಗಿದ್ದಾರೆ.

ಆಮೇಲೆ ಎಸ್‌ಪಿ -ಬಿಎಸ್‌ಪಿ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ಮಾಡಿದ ವರುಣ್ ಅವರೆಲ್ಲರೂ ಪಾಕಿಸ್ತಾನಿಗಳು. ಅಲ್ಲವೇನೋ ಎಂದು  ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು