ದೆಹಲಿಯಲ್ಲಿ ಎರಡನೇ ದಿನವೂ ಭಾರಿ ಮಳೆ: ಕುಸಿದ ರಸ್ತೆ, ಸಂಚಾರಕ್ಕೆ ಅಡ್ಡಿ 

7

ದೆಹಲಿಯಲ್ಲಿ ಎರಡನೇ ದಿನವೂ ಭಾರಿ ಮಳೆ: ಕುಸಿದ ರಸ್ತೆ, ಸಂಚಾರಕ್ಕೆ ಅಡ್ಡಿ 

Published:
Updated:

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಆರ್ಭಟ ಎರಡನೇ ದಿನ ಭಾನುವಾರವೂ ಜೋರಾಗಿಯೇ ಮುಂದುವರಿದಿದೆ. ರಸ್ತೆಗಳೇ ರಾಜಕಾಲುವೆಗಳಂತಾಗಿವೆ. ಪ್ಲೈಓವರ್‌ವೊಂದರ ರಸ್ತೆ ಕುಸಿದು ಗುಂಡಿ ಬಿದ್ದಿದೆ. 

ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿರುವುದರಿಂದ ಬಸ್‌ ಸೇರಿದಂತೆ ವಾಹನಗಳ ಸಂಚಾಕ್ಕೆ ತೊಂದರೆಯಾಗಿದ್ದು, ನೀರಿನಲ್ಲಿ ಅಲ್ಲಲ್ಲಿ ಬಸ್‌ಗಳು ಮುಂದೆ ಹೋಗದೆ ನಿಂತಿವೆ. ಬಸ್‌ನಲ್ಲಿದ್ದ ಜನರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ.

ರೊಹ್ಟಕ್‌ ರಸ್ತೆ, ಕುತುಬ್‌ ರಸ್ತೆಯಲ್ಲಿನ ತಲ್ವಾರ್‌ ಸಾದರ್‌ ಬಜಾರ್‌ನಲ್ಲಿ ಹಾಗೂ ಕಂಡ್ಲಿ ಡಲ್ಲಪುರಾ, ದೆಹಲಿ ಗೇಟ್‌ ಅಂಬೇಡ್ಕರ್‌ ಕ್ರೀಡಾಂಗಣ ಬಹದ್ದೂರ್‌ ಶಾ ಮಾರ್ಗ ಸೇರಿದಂತೆ ಹಲವೆಡೆ ನೀರು ಜಮಾಯಿಸಿದೆ.

ಶನಿವಾರ ಬಿದ್ದ ಮಳೆಗೆ ರಾತ್ರಿ ಬೃಹತ್‌ ಮರವೊಂದು ಬಿದ್ದಿದೆ. ಇದರಿಂದ ಐಐಟಿ ಹಾಝ್‌ ಖಾಸ್‌ನಿಂದ ಎಐಐಎಂಎಸ್‌ ರಸ್ತೆ ಭಾನುವಾರ ಬೆಳಿಗ್ಗೆ ಬಂದ್‌ ಆಗಿತ್ತು. ಮರನ್ನು ಕತ್ತರಿಸಿ ತೆರವುಗೊಳಿಸಲಾಗುತ್ತಿದೆ.

ನಿರಂತರ ಮಳೆಯಿಂದ ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಜತೆಗೆ, ಟ್ರಾಫಿಕ್‌ ಜಾಮ್‌ ಆಗಿರುವುದರಿಂದ ದೆಹಲಿ ಸಂಚಾರ ಪೊಲೀಸರು ಸಾರ್ವಜನಿರಕು ಜಾಗೃತಿ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ವಿವಿಧೆಡೆ ಮಳೆಯಿಂದ ರಸ್ತೆಗಳು ಜಲಾವೃತವಾಗಿರುವ ಹಾಗೂ ಅಪಾಯದಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿರುವ ಮತ್ತು ಟ್ರಾಫಿಕ್‌ ಜಾಮ್‌ ಆಗಿರುವ ಸ್ಥಳಗಳ ಚಿತ್ರಗಳನ್ನು ದೆಹಲಿ ಪೊಲೀಸ್‌ ಇಲಾಖೆ ಟ್ವಿಟ್‌ ಮಾಡಿದೆ. ಅವು ಇಲ್ಲಿವೆ ನೋಡಿ.

* ಇದನ್ನೂ ಓದಿ...

ದೆಹಲಿಯಲ್ಲಿ ಭಾರಿ ಮಳೆ: ನೀರಿನಲ್ಲಿ ಸಿಲುಕಿದ ಬಸ್‌ನಲ್ಲಿದ್ದ 30 ಮಂದಿ ರಕ್ಷಣೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !