ಗುರುವಾರ , ಜೂನ್ 4, 2020
27 °C

ಕಾನ್ಪುರ: ಲಾಕ್‌‌ಡೌನ್ ಕಾರಣ ಶುದ್ಧಗೊಳ್ಳುತ್ತಿರುವ ಗಂಗಾ ನದಿ ನೀರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಾನ್ಪುರ (ಉತ್ತರಪ್ರದೇಶ): ಲಾಕ್ ಡೌನ್‌‌ನಿಂದಾಗಿ ಇಲ್ಲಿನ ಗಂಗಾ ನದಿಯ ನೀರು ತಿಳಿಯಾಗುತ್ತಿದ್ದು, ಕಲುಷಿತ ಪ್ರಮಾಣ ಕಡಿಮೆಯಾಗುತ್ತಿದ್ದು, ಗುಣಮಟ್ಟದಲ್ಲಿ ಶೇ.40ರಿಂದ 50 ರಷ್ಟು ಉತ್ತಮ ಮಟ್ಟಕ್ಕೆ ತಲುಪಿದೆ ಎಂದು ಎಎನ್ಐ ವರದಿ ಮಾಡಿದೆ.

ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಕೆ.ಮಿಶ್ರಾ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಕೊರೊನಾ ಸೋಂಕು ಕಾರಣ ಲಾಕ್ ಡೌನ್ ಆಗಿರುವುದರಿಂದ ಗಂಗಾ ನದಿಗೆ ಕೈಗಾರಿಕೆಗಳಿಂದ ಕಲುಷಿತ ದ್ರಾವಣ ಬರುವುದು ನಿಂತಿದೆ. ಈ ಕಾರಣಕ್ಕಾಗಿ ಗುಣಮಟ್ಟದಲ್ಲಿ ನೀರು 10ದಿನಕ್ಕೆ ಶೇ.50ರಷ್ಟು ಉತ್ತಮಮಟ್ಟಕ್ಕೆ ತಲುಪಿದೆ. ಕಾನ್ಪುರದಲ್ಲಿ ಈ ಬೆಳವಣಿಗೆ ಕಂಡು ಬಂತು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು