ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ಭಾರತದಲ್ಲಿ ವನ್ಯಜೀವಿಗಳ ಬೇಟೆ ದುಪ್ಪಟ್ಟು: ಅಧ್ಯಯನ ವರದಿ

Last Updated 4 ಜೂನ್ 2020, 3:56 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ಅತೀ ಹೆಚ್ಚು ಬೇಟೆ ಪ್ರಕರಣಗಳು ದಾಖಲಾಗಿವೆ. ಮಾಂಸ ಮತ್ತು ವ್ಯಾಪಾರಕ್ಕಾಗಿ ಸುಮಾರು 88 ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಲಾಕ್‌ಡೌನ್‌ಗಿಂತ ಮುನ್ನ 35 ಪ್ರಕರಣಗಳು ವರದಿಯಾಗಿದ್ದು ಲಾಕ್‌ಡೌನ್ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವನ್ಯಜೀವಿ ವ್ಯಾಪಾರದ ಮೇಲೆ ನಿಗಾ ಇರಿಸುವ ಟ್ರಾಫಿಕ್ ಎಂಬ ಸಂಸ್ಥೆ ನಡೆಸಿದ ಅಧ್ಯಯ ವರದಿಯಲ್ಲಿ ಹೇಳಲಾಗಿದೆ.

ಟ್ರಾಫಿಕ್ ಮತ್ತು ವನ್ಯಜೀವಿ ವ್ಯಾಪಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‍ಜಿಒ ಜಂಟಿಯಾಗಿ ಈ ಅಧ್ಯಯನವನ್ನು ಮಾಡಿದೆ. ಅಧ್ಯಯನ ವರದಿ ಪ್ರಕಾರ ಫೆಬ್ರುವರಿ 10 -22ರ ವರೆಗೆ ಕಳ್ಳಬೇಟೆ ಪ್ರಕರಣಗಳ ಸಂಖ್ಯೆ 35 ಆಗಿದೆ. ಅದೇ ವೇಳೆ ಮಾರ್ಚ್ 23- ಮೇ3ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ88ಕ್ಕೇರಿದೆ.

ವಿಶ್ವ ವನ್ಯಜೀವಿ ಒಕ್ಕೂಟ(ಡಬ್ಲ್ಯುಡಬ್ಲ್ಯುಎಫ್)ದ ಅಂಗವಾಗಿ ಟ್ರಾಫಿಕ್ ಕಾರ್ಯ ನಿರ್ವಹಿಸುತ್ತಿದ್ದು, ಭಾರತದಲ್ಲಿ ಲಾಕ್‍ಡೌನ್ ಅವಧಿಯಲ್ಲಿ ಕಳ್ಳಬೇಟೆ ಜಾಸ್ತಿಯಾಗಿದೆ. ಇದು ಯಾವುದೇ ಭೌಗೋಳಿಕ ಪ್ರದೇಶ, ರಾಜ್ಯ ಅಥವಾ ನಿರ್ದಿಷ್ಟ ವನ್ಯಜೀವಿ ಪ್ರದೇಶದಲ್ಲಿ ಮಾತ್ರ ನಡೆಯುತ್ತಿಲ್ಲ. ಲಾಕ್‌ಡೌನ್‌ಗಿಂತ ಮುಂಚೆ 4 ಚಿರತೆಯನ್ನು ಕೊಲ್ಲಲಾಗಿತ್ತು. ಲಾಕ್‍ಡೌನ್ ಅವಧಿಯಲ್ಲಿ 9 ಚಿರತೆಗಳು ಹತ್ಯೆಯಾಗಿವೆ ಎಂದು 'ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ಭಾರತದಲ್ಲಿನ ವನ್ಯಜೀವಿಗಳು: ಕಳ್ಳಬೇಟೆ ಮತ್ತು ವನ್ಯಜೀವಿಗಳ ಅಕ್ರಮ ಮಾರಾಟ ದಂಧೆ' ಎಂಬ ವರದಿಯಲ್ಲಿ ಹೇಳಲಾಗಿದೆ.

ಮಾಂಸಕ್ಕಾಗಿ ಮತ್ತು ಸ್ಥಳೀಯವಾಗಿ ಮಾರಾಟ ಮಾಡುವುದರಿಂದ ಲಾಕ್‍ಡೌನ್ ಅವಧಿಯಲ್ಲಿ ಕಳ್ಳಬೇಟೆ ಪ್ರಕರಣ ಜಾಸ್ತಿಯಾಗಿದೆ. ಅದೇ ವೇಳೆ ಭವಿಷ್ಯದ ವ್ಯಾಪಾರಕ್ಕಾಗಿ ವನ್ಯಜೀವಿ ಉತ್ಪನ್ನಗಳನ್ನು ಸಂಗ್ರಹಿಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವರದಿಯಲ್ಲಿದೆ.
ಕಾನೂನು ಜಾರಿ ಸಂಸ್ಥೆಗಳ ಸತತ ಪ್ರಯತ್ನಗಳ ಹೊರತಾಗಿಯೂ, ಲಾಕ್‌ಡೌನ್ ಅವಧಿಯಲ್ಲಿ ಭಾರತದಲ್ಲಿ ಕಾಡು ಪ್ರಾಣಿಗಳ ಸಂಖ್ಯೆಯು ಹೆಚ್ಚಿನ ಅಪಾಯದಲ್ಲಿದೆ ಎಂದು ಅಧ್ಯಯನವು ಸೂಚಿಸುತ್ತದೆ.

ಗೊರಸು ಇರುವ ಪ್ರಾಣಿಗಳು ಮತ್ತು ಸಣ್ಣ ಪ್ರಾಣಿಗಳ ಬೇಟೆಯಾಡುವುದನ್ನು ನಿಯಂತ್ರಿಸದೇ ಇದ್ದರೆಅದು ಹುಲಿಗಳು ಮತ್ತು ಚಿರತೆಗಳಂತಹ ಪ್ರಾಣಿಗಳ ಆಹಾರ ಮತ್ತು ಪರಿಸರ ವ್ಯವಸ್ಥೆಯ ಬರಿದಾಗುವಿಕೆಗೆ ಕಾರಣವಾಗುತ್ತದೆ. ಇದು ಮಾನವ-ವನ್ಯಜೀವಿ ಸಂಘರ್ಷಗಳ ಘಟನೆಗಳಿಗೆ ಕಾರಣವಾಗುತ್ತದೆ ಮತ್ತು ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಮಹತ್ವದ ಯಶಸ್ಸನ್ನು ಹಾಳು ಮಾಡುತ್ತದೆ ಎಂದು ಡಬ್ಲ್ಯುಡಬ್ಲ್ಯುಎಫ್- ಇಂಡಿಯಾದ ಸಿಇಒ ರವಿ ಸಿಂಗ್ ಹೇಳಿದ್ದಾರೆ.

ಮಾಂಸಕ್ಕಾಗಿ ಬೇಟೆಯಾಡುವುದು ಹೆಚ್ಚಾಗಿದೆ. ಸುಮಾರು 22 ಶೇಕಡಾ (35 ರಲ್ಲಿ ಎಂಟು) ಲಾಕ್‌ಡೌನ್‌ಗೆ ಮುಂಚಿತವಾಗಿ ವರದಿಯಾದ ಒಟ್ಟು ಪ್ರಕರಣಗಳಾಗಿದ್ದು ಲಾಕ್‍ಡೌನ್ ಅವಧಿಯಲ್ಲಿ ಶೇ.44 (88 ರಲ್ಲಿ 39) ಹೆಚ್ಚಾಗಿದೆ

ಮೊಲಗಳು, ಮುಳ್ಳುಹಂದಿಗಳು, ಪ್ಯಾಂಗೊಲಿನ್‌ಗಳು, ದೈತ್ಯ ಅಳಿಲುಗಳು, ಸಿವೆಟ್‌ ಬೆಕ್ಕುಗಳು, ಕೋತಿಗಳು, ಸಣ್ಣ ಕಾಡು ಬೆಕ್ಕುಗಳು ಸೇರಿದಂತೆ ಸಣ್ಣ ಸಸ್ತನಿಗಳನ್ನು ಬೇಟೆಯಲ್ಲಿಯೂ ಗಮನಾರ್ಹವಾದ ಹೆಚ್ಚಳವಾಗಿದೆ.

ಕೆಲವೊಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದರೂ, ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿನ ಬೇಟೆಯಾಡುವುದು ಬಹುಷಃಮಾಂಸಕ್ಕಾಗಿ ಅಥವಾ ಸ್ಥಳೀಯ ವ್ಯಾಪಾರಕ್ಕಾಗಿ ಆಗಿರಬಹುದು ಎಂದು ವರದಿಯಲ್ಲಿ ಹೇಳಿದೆ.

ಲಾಕ್‌ಡೌನ್ ಪೂರ್ವ ಮತ್ತು ಲಾಕ್‌ಡೌನ್ ಅವಧಿಗಳ ನಡುವೆ ಇವುಗಳ ಪ್ರಕರಣಗಳು ಶೇಕಡಾ 17 ರಿಂದ 25 ಕ್ಕೆ ಏರಿಕೆಯಾಗಿವೆ ಎಂಬುದು ಗಮನಿಸಬೇಕಾದ ಅಂಶ. ಏತನ್ಮಧ್ಯೆ, ಆಮೆ ಮತ್ತು ಸಿಹಿನೀರಿನ ಆಮೆಗಳ ಬೇಟೆ ಮತ್ತು ಅಕ್ರಮ ದಂಧೆ ಬಗ್ಗೆ ಪ್ರಕರಣಗಳು ಕಡಿಮೆ ಆಗಿದೆ.ಲಾಕ್‌ಡೌನ್ ಅವಧಿಯಲ್ಲಿ ಈ ರೀತಿಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

ಮಾಂಸಕ್ಕಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿರುವುದು ಕಾನೂನು ಜಾರಿ ಸಂಸ್ಥೆಗಳ ಮೇಲೆ ಹೆಚ್ಚುವರಿ ಹೊರೆಯಾಗಿದೆ.ಹಾಗಾಗಿ ಪರಿಸ್ಥಿತಿಗಳನ್ನು ನಿಯಂತ್ರಿಸಲು ಈ ಸಂಸ್ಥೆಗಳನ್ನು ಸಮರ್ಪಕವಾಗಿ ಮತ್ತು ಸಮಯೋಚಿತವಾಗಿ ಬೆಂಬಲಿಸಬೇಕಾಗಿದೆ ಎಂದು ಟ್ರಾಫಿಕ್ ಇಂಡಿಯಾ ಕಚೇರಿಯ ಮುಖ್ಯಸ್ಥ ಸಾಕೇತ್ ಬಡೋಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT