ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳಿದ ಮರ; ತಪ್ಪಿದ ಅನಾಹುತ

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ಗಾಳಿಯ ಪರಿಣಾಮ ಹೆಸರಘಟ್ಟ ಹೋಬಳಿಯ ಹುರುಳಿ ಚಿಕ್ಕನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಬೃಹತ್ ಆಲದ ಮರವೊಂದು ರಸ್ತೆಯ ಮೇಲೆ ಬಿದ್ದಿದ್ದರಿಂದ ಸುಮಾರು ಎರಡು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

‘ಮರ ಬೀಳುವ ವೇಳೆಗೆ ಸರಿಯಾಗಿ ಮಾರ್ಕೆಟ್‍ನಿಂದ ಹೆಸರಘಟ್ಟಕ್ಕೆ ಹೋಗುವ ಬಿಎಂಟಿಸಿ ಬಸ್‌ ಅಲ್ಲಿಗೆ ಬಂದಿತು. ಆದರೆ, ಮರ ರಸ್ತೆಯ ಕಡೆಗೆ ವಾಲುತ್ತಿರುವುದನ್ನು ಗಮನಿಸಿದ ಚಾಲಕ ಮೊದಲೇ ಬಸ್ಸನ್ನು ನಿಲ್ಲಿಸಿದ. ಕೂದಲೆಳೆಯಿಂದ ಭಾರಿ ಅನಾಹುತ ತಪ್ಪಿತು’ ಎಂದು ಪ್ರತ್ಯಕ್ಷದರ್ಶಿ ಕನ್ನಮ್ಮ ಹೇಳಿದರು.

ಆ ಬಳಿಕ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT