ಬುಧವಾರ, ಜನವರಿ 29, 2020
26 °C

ಎನ್‌ಆರ್‌ಸಿಗೆ ನಾನು ಯಾವುದೇ ದಾಖಲೆ ಕೊಡಲಾರೆ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನನ್ನ ಪೌರತ್ವ ಸಾಬೀತಿಗೆ ಕೇಂದ್ರ ಸರ್ಕಾರಕ್ಕೆ ನಾನು ಯಾವುದೇ ದಾಖಲೆ ಕೊಡುವುದಿಲ್ಲ. ಬೇಕಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಶಾಸಕ ಡಿ.ಕೆ. ಶಿವಕು‌ಮಾರ್ ಸವಾಲು ಹಾಕಿದರು.

ಕನಕಪುರದಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ನಿರ್ಣಯಗಳಿಗೆ ಜರ್ಖಾಂಡ್ ಚುನಾವಣೆ ಫಲಿತಾಂಶ ತಕ್ಕ ಪಾಠ ಕಲಿಸಿದೆ. ಇದು ಬಿಜೆಪಿಯ ಅವನತಿಯ ಆರಂಭ ಎಂದರು.

ರಾಜ್ಯ ಸರ್ಕಾರ ಪೊಲೀಸರನ್ನು ಗುಲಾಮರಂತೆ ಬಳಸಿಕೊಂಡು ಅಮಾಯಕರ ವಿರುದ್ಧ ಎಫ್ ಐಆರ್ ಹಾಕುತ್ತಿದೆ. ನಿಜವಾಗಿ ಕ್ರಮ ಕೈಗೊಳ್ಳುವುದೇ ಆದರೆ ಪೊಲೀಸರು ಮುಖ್ಯಮಂತ್ರಿ, ಗೃಹ ಮಂತ್ರಿ‌ ವಿರುದ್ಧ ಎಫ್ ಐಆರ್ ಹಾಕಬೇಕು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು