'ಗಂಡಸರ ಕೇಳಿ ಮತ ನೀಡಿ' ಎಂದ ಕೇಜ್ರಿವಾಲ್‌ಗೆ ಸ್ಮೃತಿ ಇರಾನಿ ತರಾಟೆ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ನಡೆಯುತ್ತಿರುವ ಮಧ್ಯೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಹೇಳಿಕೆಯೊಂದನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಜ್ರಿವಾಲ್ ಅವರು ಟ್ವೀಟ್ ಮಾಡಿ, ದೆಹಲಿ ಮಹಿಳೆಯರು ಮತದಾನ ಮಾಡುವಾಗ ಯಾರಿಗೆ ಮತ ಹಾಕಬೇಕೆಂದು ನಿಮ್ಮ ಮನೆಯ ಗಂಡಸರ ಜೊತೆ ಚರ್ಚಿಸಿ ಮತದಾನ ಮಾಡಿ ಎಂಬ ಹೇಳಿಕೆ ಪ್ರಕಟಿಸಿದ್ದರು.
ಇದೇ ಹೇಳಿಕೆಯನ್ನು ಪ್ರಸ್ತಾಪಿಸಿದ ಇರಾನಿ, ಕೇಜ್ರಿವಾಲ್ ಅವರು ಲಿಂಗಭೇದ ಮಾಡುತ್ತಿದ್ದಾರೆ, ಮಹಿಳೆಯರು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ. ಮುಂದುವರಿದ ಸ್ಮೃತಿ, ಮಹಿಳೆಯರು ಮತದಾನ ಮಾಡುವಾಗ ನಿಮ್ಮ ಮನೆಯ ಗಂಡಸರ ಜೊತೆ ಚರ್ಚಿಸಿ ಎಂದರೆ, ಮಹಿಳೆಯರಿಗೆ ಸ್ವಂತ ಸಾಮರ್ಥ್ಯ ಇಲ್ಲ ಎಂದು ತಿಳಿದಿದ್ದೀರಾ ಎಂದು ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ರೀತಿ ಹೇಳುವ ಮೂಲಕ ತಾರತಮ್ಯ ಮಾಡುತ್ತಿದ್ದೀರಿ ಎಂದಿದ್ದಾರೆ.
ಅಲ್ಲದೆ, #महिलाविरोधीकेजरीवाल ಎಂದು ಟ್ವಿಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
आप क्या महिलाओं को इतना सक्षम नहीं समझते की वे स्वयं निर्धारित कर सके किसे वोट देना है ? #महिलाविरोधीकेजरीवाल https://t.co/fUnqt2gJZk
— Smriti Z Irani (@smritiirani) February 8, 2020
ಇರಾನಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಸ್ಮೃತಿ ಇರಾನಿಯವರೆ ದೆಹಲಿ ಮಹಿಳೆಯರು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಕುಟುಂಬ ನಿರ್ವಹಣೆಗಾಗಿಯಾದರೂ ಯಾರಿಗೆ ಮತ ಚಲಾಯಿಸಬೇಕೆಂದು ನಿರ್ಧರಿಸಿದ್ದಾರೆ. ನಾನು ದೆಹಲಿ ಮಹಿಳೆಯರಲ್ಲಿ ವಿಶೇಷ ಮನವಿ ಮಾಡಿದ್ದೇನೆ ಅಷ್ಟೆ. ತಾರತಮ್ಯ ಮಾಡಿಲ್ಲ ಎಂದಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ 1.47 ಕೋಟಿ ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. 672 ಅಭ್ಯರ್ಥಿಗಳು ತಮ್ಮ ಸ್ಪರ್ಧಿಸಿದ್ದಾರೆ. ಇವರಲ್ಲಿ 66.8ಲಕ್ಷ ಮಹಿಳಾ ಮತದಾರರಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.