ಭಾನುವಾರ, ಮಾರ್ಚ್ 7, 2021
19 °C

ಮೋದಿ, ಶಾ ಗಿಂತ ಹೆಚ್ಚು ರ‍್ಯಾಲಿ ನಡೆಸಿದ ಯೋಗಿ ಈಗ ಬಿಜೆಪಿಯ ‘ತಾರಾ ಪ್ರಚಾರಕ’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಖನೌ: ಸ್ವಂತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕಠಿಣ ಸವಾಲು ಎದುರಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊರರಾಜ್ಯಗಳಲ್ಲಿ ಬಿಜೆಪಿ ಪಾಲಿನ ತಾರಾ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ. ಈ ಬಗ್ಗೆ ದಿ ಹಿಂದೂ ವರದಿ ಮಾಡಿದೆ.

ಮಿಜೋರಾಂ ಹೊರತುಪಡಿಸಿ ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗಿಂತಲೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಯೋಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮನ ಭಕ್ತರು ಬಿಜೆಪಿ, ರಾವಣನ ಭಕ್ತರು ಕಾಂಗ್ರೆಸ್‌ಗೆ ಮತ ಹಾಕ್ತಾರೆ: ಆದಿತ್ಯನಾಥ

ಮಧ್ಯಪ್ರದೇಶ, ಛತ್ತೀಸ್‌ಗಡ, ತೆಲಂಗಾಣ, ರಾಜಸ್ಥಾನ ವಿಧಾನಸಭೆ ಚುನಾವಣೆ ವೇಳೆ ಮೋದಿ ಹಾಗೂ ಶಾ ಕ್ರಮವಾಗಿ 31 ಮತ್ತು 56 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಇದೇ ವೇಳೆ ಯೋಗಿ ಭಾಗವಹಿಸಿದ ಚುನಾವಣಾ ರ‍್ಯಾಲಿ ಸಂಖ್ಯೆ ಬರೋಬ್ಬರಿ 74. ಅವರು ಮಧ್ಯಪ್ರದೇಶದಲ್ಲಿ 17, ಛತ್ತೀಸ್‌ಗಡದಲ್ಲಿ 23, ತೆಲಂಗಾಣದಲ್ಲಿ 8, ರಾಜಸ್ಥಾನದಲ್ಲಿ 26 ಬಾರಿ ಕಾಣಿಸಿಕೊಂಡಿದ್ದಾರೆ.

ಯೋಗಿ ಆದಿತ್ಯನಾಥ ಅವರು ಹೆಚ್ಚು ರ‍್ಯಾಲಿಗಳಲ್ಲಿ ಭಾಗವಹಿಸಿರುವುದು ಅವರ ಜನಪ್ರಿಯತೆಯನ್ನು ಸೂಚಿಸುತ್ತದೆ ಎಂದಿರುವ ಉತ್ತರ ಪ್ರದೇಶ ಬಿಜೆಪಿ ಘಟಕದ ವಕ್ತಾರ ಚಂದ್ರಮೋಹನ್‌, ‘ಇದು ಅವರ ಮಾದರಿ ಸರ್ಕಾರಕ್ಕೆ ದೊರೆತ ಯಶಸ್ಸು’ ಎಂದಿದ್ದಾರೆ.

ಇದನ್ನೂ ಓದಿ: ‘ಹನುಮಾನ್‌ ದೇವಸ್ಥಾನಗಳನ್ನು ದಲಿತರು ವಶಪಡಿಸಿಕೊಳ್ಳಬೇಕು’

ರಾಜಸ್ಥಾನದ ಅಲ್ವರ್‌ನಲ್ಲಿ ನಡೆದ ರ‍್ಯಾಲಿ ಸಂದರ್ಭದಲ್ಲಿ‌ ‘ಹನುಮಂತ ವಂಚಿತ, ದಲಿತ ಮತ್ತು ಅರಣ್ಯವಾಸಿ’ ಎಂದು ಯೋಗಿ ನೀಡಿದ್ದ ಹೇಳಿಕೆಗೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸಿದ್ದರು.

ನರೇಂದ್ರ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ ನಡೆಸಿದ ರ‍್ಯಾಲಿಗಳ  ಅಂಕಿ ಅಂಶ

***ನರೇಂದ್ರ ಮೋದಿಅಮಿತ್‌ ಶಾಯೋಗಿ ಆದಿತ್ಯನಾಥ
ಮಧ್ಯಪ್ರದೇಶ102317
ಛತ್ತೀಸ್‌ಗಡ040823
ತೆಲಂಗಾಣ051008
ರಾಜಸ್ಥಾನ121526

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು