ಮುಂಬೈ: ಪ್ರೀತಿಸಲು ನಿರಾಕರಿಸಿದಶಿಕ್ಷಕಿಯಮೇಲೆ ನಡು ರಸ್ತೆಯಲ್ಲಿಯೇ ಯುವಕನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಲೆಗೆ ಯತ್ನಿಸಿರುವ ಅಮಾನುಷ ಘಟನೆಯೊಂದು ಇಲ್ಲಿನ ವಿದರ್ಭ ಪ್ರಾಂತ್ಯದಲ್ಲಿ ನಡೆದಿದೆ.

ವಾರ್ಧಾ ಜಿಲ್ಲೆಯ ಹಿಂಗನ್ ಘಾಟ್ ಪ್ರದೇಶದ ಯುವಕ ವಿಕ್ಕಿ ನಗ್ರಾಲೆ ಆರೋಪಿ.ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಜ್ವಾಲೆ ಕಂಡ ಸಾರ್ವಜನಿಕರು ಬೆಂಕಿಯನ್ನು ನಂದಿಸಿ ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರಗಾಯಗೊಂಡ ಆಕೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಈ ವಿಷಯ ಕುರಿತು ಹೇಳಿಕೆ ನೀಡಿ, ಈ ಘಟನೆಯಲ್ಲಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ವಿದೇಶಿಯರ ಕರಾಳ ಜಗತ್ತು

ಸಂಸದ ರಾಮದಾಸ್ ತಡಸ್ ಮಾತನಾಡಿ, ಇದುಗಂಭೀರ ಘಟನೆಯಾಗಿದ್ದು, ಇಂತಹ ಘಟನೆಗಳು ಎಂದಿಗೂ ನಡೆಯಕೂಡದು. ಆರೋಪಿ ಯಾರೇ ಆಗಲಿ ಆತನನ್ನು ಬಂಧಿಸಿ ಕಾನೂನಿನಂತೆ ಕ್ರಮ ಕೈಗೊಳ್ಳಿ, ವೈದ್ಯರ ಜೊತೆ ನಾನು ಸತತ ಸಂಪರ್ಕದಲ್ಲಿದ್ದುಗಾಯಾಳುವಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇದು ಮಹಿಳೆಯ ರಕ್ಷಣೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.