ಶನಿವಾರ, ಜೂನ್ 6, 2020
27 °C

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

representational image

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ 47 ಸೇರಿದಂತೆ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 138 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,743ಕ್ಕೆ ಏರಿದೆ. 

ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 116 ಮಂದಿ ಅನ್ಯರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸವನ್ನು ಹೊಂದಿದ್ದಾರೆ. ಅದರಲ್ಲೂ 111 ಮಂದಿ ಮಹಾರಾಷ್ಟ್ರದಿಂದಲೇ ಬಂದವರಾಗಿದ್ದಾರೆ. 

ಚಿಕ್ಕಬಳ್ಳಾಪುರದಲ್ಲಿ 47, ಹಾಸನದಲ್ಲಿ 14, ರಾಯಚೂರಿನಲ್ಲಿ 10, ಬೀದರ್‌ನಲ್ಲಿ 9, ತುಮಕೂರಿನಲ್ಲಿ 8, ಮಂಡ್ಯದಲ್ಲಿ 8, ವಿಜಯಪುರದಲ್ಲಿ 7, ಬೆಂಗಳೂರಿನಲ್ಲಿ 5, ಬೆಂಗಳೂರು ಗ್ರಾಮಾಂತರದಲ್ಲಿ 5, ಚಿಕ್ಕಮಗಳೂರಿನಲ್ಲಿ 5, ದಾವಣಗೆರೆಯಲ್ಲಿ 3, ಹಾವೇರಿಯಲ್ಲಿ 3, ಉಡುಪಿಯಲ್ಲಿ 3, ಧಾರವಾಡದಲ್ಲಿ 2, ಶಿವಮೊಗ್ಗದಲ್ಲಿ 2, ಯಾದಗಿರಿಯಲ್ಲಿ 2 ಹಾಗೂ ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸದ್ಯ 50 ಪ್ರಯೋಗಾಲಯ
ಗಳು ಕಾರ್ಯನಿರ್ವಹಿಸುತ್ತಿದ್ದು, ಶುಕ್ರವಾರ ಒಂದೇ ದಿನ 12,229 ಪರೀಕ್ಷೆ ಮಾಡಲಾಗಿದೆ. ಒಂದು ದಿನ ಮಾಡಿದ ಗರಿಷ್ಠ ಪರೀಕ್ಷೆಗಳ ಸಂಖ್ಯೆ ಇದಾಗಿದೆ. ಈವರೆಗೆ ಒಟ್ಟು 1,86,526 ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು