ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯನ್ ಪ್ರವಾಸಿಗರು ತವರಿಗೆ ಪ್ರಯಾಣ

ಗೋಕರ್ಣಕ್ಕೆ ಬಂದಿದ್ದ 22 ಮಂದಿ ಪ್ರವಾಸಿಗರು ಸ್ವದೇಶಕ್ಕೆ ವಾಪಸ್
Last Updated 17 ಏಪ್ರಿಲ್ 2020, 15:50 IST
ಅಕ್ಷರ ಗಾತ್ರ

ಗೋಕರ್ಣ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದಬಳಿಕ ಗೋಕರ್ಣದಲ್ಲಿ ಬಾಕಿಯಾಗಿದ್ದರಷ್ಯಾ ಪ್ರವಾಸಿಗರನ್ನು ಶುಕ್ರವಾರ ತವರಿಗೆ ಕಳುಹಿಸಿಕೊಡಲಾಗಿದೆ. ಗೋವಾದಿಂದ ವಿಶೇಷ ವಿಮಾನದಲ್ಲಿ 22 ಮಂದಿ ತಮ್ಮ ದೇಶಕ್ಕೆ ಪ್ರಯಾಣಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಹಾಗೂ ಉತ್ತರ ಕನ್ನಡದ ಜಿಲ್ಲಾಡಳಿತದ ಸಹಾಯದಿಂದ ಗೋಕರ್ಣ ಪೊಲೀಸರು ಈ ವ್ಯವಸ್ಥೆ ಮಾಡಿದ್ದಾರೆ.ಗೋಕರ್ಣದಿಂದಅವರನ್ನು ರಾಜ್ಯ ರಸ್ತೆ ಸಾರಿಗೆ ಬಸ್‌ಮೂಲಕ ಗೋವಾ ವಿಮಾನ ನಿಲ್ದಾಣಕ್ಕೆಕಳುಹಿಸಿ ಕೊಡಲಾಯಿತು. ರಾತ್ರಿ 9ಕ್ಕೆ ರಷ್ಯಾದ ವಿಶೇಷ ವಿಮಾನವು ಪ್ರವಾಸಿಗರನ್ನು ಕರೆದುಕೊಂಡು ಪ್ರಯಾಣಿಸಲಿದೆ. ಇದಕ್ಕೂ ಮೊದಲು ಎಲ್ಲ ಪ್ರವಾಸಿಗರ ಆರೋಗ್ಯ ತಪಾಸಣೆಯು ವಿಮಾನ ನಿಲ್ದಾಣದಲ್ಲಿ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರವೇ 100ಕ್ಕೂ ಹೆಚ್ಚು ರಷ್ಯನ್ನರು ತವರಿಗೆ ಹೊರಡಲು ತಯಾರಾಗಿದ್ದರು. ಆದರೆ, ಕಾರಣಾಂತರದಿಂದ ಅವರ ಪ್ರವಾಸ ರದ್ದಾಗಿತ್ತು. ಸ್ಥಳೀಯ ಠಾಣೆಯ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆಯ ಕೃಷ್ಣಾ ನಾಯ್ಕ ಹೆಚ್ಚಿನ ಮುತುವರ್ಜಿ ವಹಿಸಿ ವಿದೇಶಿ ಪ್ರವಾಸಿಗರಿಗೆ ನೆರವಾದರು.

ಈ ಸಂದರ್ಭದಲ್ಲಿ ಕುಮಟಾ ಸಿ.ಪಿ.ಐ. ಪರಮೇಶ್ವರ ಗುನಗ, ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ, ಸಿಬ್ಬಂದಿ ಶಿವಾನಂದ ಗೌಡ, ರಾಜೇಶ ನಾಯ್ಕ, ನಾಗರಾಜ ಪಟಗಾರ, ನಾಗರಾಜ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT