ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ: ಒಂದೇ ದಿನ 45 ಕೋವಿಡ್ ಪಾಸಿಟಿವ್

Last Updated 8 ಮೇ 2020, 8:10 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ರಾಜ್ಯಲದಲ್ಲಿ ಶುಕ್ರವಾರ ಒಂದೇ ದಿನ 45 ಕೋವಿಡ್‌ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 7, ಭಟ್ಕಳದಲ್ಲಿ 12, ದಾವಣಗೆರೆ 14, ಬೆಳಗಾವಿ 11, ಬಳ್ಳಾರಿಯಲ್ಲಿ 1 ಪ್ರಕರಣಗಳು ವರದಿಯಾಗಿದೆ.

ಬೆಳಗಾವಿ: ಮತ್ತೆ 11 ಜನರಿಗೆ ಸೋಂಕು; ಒಟ್ಟು ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ

ಜಿಲ್ಲೆಯಲ್ಲಿ ಮತ್ತೆ 11 ಜನರಿಗೆ ಕೋವಿಡ್‌–19 ತಗುಲಿದ್ದು, ಒಟ್ಟು ಬಾಧಿತರ ಸಂಖ್ಯೆ 85ಕ್ಕೆ ಏರಿದೆ.
ಹೊಸದಾಗಿ ಸೋಂಕು ಪತ್ತೆಯಾದವರು ಹಿರೇಬಾಗೇವಾಡಿ ನಿವಾಸಿಗಳಾಗಿದ್ದು, ಇವರಲ್ಲಿ ಆರು ಜನ ಪುರುಷರು ಹಾಗೂ ಐದು ಜನ ಮಹಿಳೆಯರು ಇದ್ದಾರೆ.

ಭಟ್ಕಳ: ಮತ್ತೆ 12 ಮಂದಿಗೆ ಕೋವಿಡ್ ದೃಢ

ಭಟ್ಕಳದಲ್ಲಿ ಶುಕ್ರವಾರ ಒಂದೇ ದಿನ ಕೋವಿಡ್ 19 ಪೀಡಿತ 12 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24ಕ್ಕೇರಿದೆ. 11 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.

ಹೊಸದಾಗಿ ದೃಢಪಟ್ಟಿರುವ 12 ಮಂದಿಯ ಪೈಕಿ 5 ತಿಂಗಳ ಹಸುಗೂಸು, 11 ಮತ್ತು 12 ವರ್ಷದ ಬಾಲಕಿಯರೂ ಒಳಗೊಂಡಿದ್ದಾರೆ. ಅಲ್ಲದೇ 83 ಮತ್ತು 75 ವರ್ಷದ ಹಿರಿಯರಿಗೂ ದೃಢಪಟ್ಟಿದೆ.

ಮೂರು ದಿನಗಳ ಹಿಂದೆ 18 ವರ್ಷದ ಯುವತಿಗೆ ಕೋವಿಡ್ 19 ದೃಢಪಟ್ಟಿತ್ತು. ಶುಕ್ರವಾರ ದೃಢಪಟ್ಟ ಎಲ್ಲರೂ ಆ ಯುವತಿಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ದಾವಣಗೆರೆಯಲ್ಲಿ ಮತ್ತೆ 14 ಜನರಿಗೆ ಕೋವಿಡ್‌

ನಗರದಲ್ಲಿ ಮತ್ತೆ ಆರು ಮಕ್ಕಳು ಸೇರಿ 14 ಜನರಲ್ಲಿ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದ್ದು, ಕೋವಿಡ್‌ ರೋಗ ಅಟ್ಟಹಾಸ ಮೆರೆಯುತ್ತಿರುವುದು ನಾಗರಿಕರ ಆತಂಕವನ್ನು ಹೆಚ್ಚಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 61 ಜನರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.

ಕೋವಿಡ್‌–19 ರೋಗದಿಂದ ಗುರುವಾರ ಮಹಿಳೆ ಮೃತಪಟ್ಟಿರುವುದೂ ಸೇರಿ ನಗರದಲ್ಲಿ ಇದುವರೆಗೆ ಒಟ್ಟು ನಾಲ್ವರು ಈ ರೋಗದಿಂದ ಅಸುನೀಗಿದ್ದಾರೆ. ಇಬ್ಬರು ರೋಗಿಗಳು ಮಾತ್ರ ಗುಣಮುಖರಾಗಿದ್ದಾರೆ. ಶುಕ್ರವಾರ ವರದಿಯಾದ ಪ್ರಕರಣಗಳೂ ಸೇರಿ ಜಿಲ್ಲೆಯಲ್ಲಿ ಒಟ್ಟು 55 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ.

ಬಾಷಾನಗರದ ಸ್ಟಾಫ್‌ ನರ್ಸ್‌ನ (ಪಿ–533) ಸಂಪರ್ಕದಿಂದ 10 ಜನರಿಗೆ ಹಾಗೂ ಜಾಲಿನಗರದ ಮೃತ ವೃದ್ಧ (ಪಿ–556)ನಿಂದ ನಾಲ್ವರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ 18 ವರ್ಷದ ಯುವತಿ (ಪಿ–728), ಆರು ವರ್ಷದ ಬಾಲಕ (ಪಿ–729), ಒಂಬತ್ತು ವರ್ಷದ ಬಾಲಕ (ಪಿ–730), 36 ವರ್ಷದ ಯುವಕ (ಪಿ–731), 32 ವರ್ಷದ ಮಹಿಳೆ (ಪಿ–732), ಮೂರು ವರ್ಷದ ಬಾಲಕಿ (ಪಿ–733), 48 ವರ್ಷದ ಪುರುಷ (ಪಿ–734), 13 ವರ್ಷದ ಬಾಲಕಿ (ಪಿ–735), ಎಂಟು ವರ್ಷದ ಬಾಲಕ (ಪಿ–736), 38 ವರ್ಷದ ಮಹಿಳೆಗೆ (ಪಿ–737) ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸ್ಟಾಫ್‌ ನರ್ಸ್‌ನ ಸಂಪರ್ಕದಿಂದ ಇದುವರೆಗೆ ಒಟ್ಟು 30 ಜನರಿಗೆ ಸೋಂಕು ಹರಡಿಸಿದೆ.

ಜಾಲಿನಗರದ ವೃದ್ಧನ ಸಂಪರ್ಕದಿಂದ 10 ವರ್ಷದ ಬಾಲಕ (ಪಿ–724), 20 ವರ್ಷದ ಯುವಕ (ಪಿ–725), 18 ವರ್ಷದ ಯುವತಿ (ಪಿ–726), 27 ವರ್ಷದ ಮಹಿಳೆಗೆ (ಪಿ–727) ಕೊರೊನಾ ಸೋಂಕು ತಗುಲಿದೆ. ಈ ವೃದ್ಧನಿಂದ ಇದುವರೆಗೆ ಒಟ್ಟು 16 ಜನರಿಗೆ ಸೋಂಕು ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT