ಬೆಂಗಳೂರು: ಮದ್ಯದ ನಶೆಯಲ್ಲಿ ಬುಧವಾರ ರಾತ್ರಿ ಎರಡು ಕಡೆ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಆಂತ್ಯಗೊಂಡಿದೆ.
ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಹಳ್ಳಿ ರಸ್ತೆಯ ಮನೆಯೊಂದರಲ್ಲಿ ಕಿಶೋರ್ (25) ಎಂಬಾತನ ಹತ್ಯೆ ನಡೆದಿದೆ.

ಕೊಲೆ ನಡೆದ ಮನೆಯ ಬಾಡಿಗೆದಾರ ರಾಜೇಶ್ ಹೋಟೆಲ್ಒಂದರಲ್ಲಿ ವ್ಯವಸ್ಥಾಪಕ. ಆತನ ಸ್ನೇಹಿತ ಕೊಲೆಯಾದವನು. ರಾತ್ರಿ ಕೆಲವರು ಸೇರಿ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಕಿಶೋರ್ಗೆ ಚಾಕುವಿನಿಂದ ಚುಚ್ಚಿ ಆರೋಪಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದರು.ಆರ್.ಟಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆ:

ರಾಮಮೂರ್ತಿ ನಗರದ ಬೋವಿ ಕಾಲೊನಿಯ ನಾಲ್ಕನೇ ಅಡ್ಡ ರಸ್ತೆಯ ಮನೆಯೊಂದರಲ್ಲಿ ರಾಜು ಅಲಿಯಾಸ್ ರಾಮ ಪ್ರಸಾದ್ ( 40) ಎಂಬವರ ಹತ್ಯೆಯಾಗಿದೆ.

ರಾಜು ಸ್ನೇಹಿತ ನೇತಾ (42) ಆರೋಪಿ. ಇಬ್ಬರು ರಾಮಮೂರ್ತಿ ನಗರದ ನಿವಾಸಿಗಳಾಗಿದ್ದು, ಹೈದರಾಬಾದ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಬುಧವಾರ ಬೆಳಗ್ಗೆಯಿಂದಲೇ ಇಬ್ಬರೂ ಪಾರ್ಟಿ ಮಾಡಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭಗೊಂಡು, ರಾಜುವಿನ ತಲೆಯನ್ನು ಗೋಡೆಗೆ ಗುದ್ದಿ ನೇತಾ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.