ಗುರುವಾರ , ಜನವರಿ 23, 2020
28 °C

ಸಭೆಗೆ ಗೈರು: ಗ್ರಾ.ಪಂ.ಸದಸ್ಯತ್ವ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಸೀಬಿ ಗ್ರಾಮ ಪಂಚಾಯಿತಿಯ 6 ಸಾಮಾನ್ಯ ಸಭೆಗಳಿಗೆ ಹಾಜರಾಗದ ಪಂಚಾಯಿತಿಯ 8 ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿದೆ.

ಈ ಸದಸ್ಯರು ಅನುಮತಿ ಪಡೆಯದೆಯೇ 2018ರ ಆಗಸ್ಟ್‌(2 ಸಭೆ), ಅಕ್ಟೋಬರ್‌, ನವೆಂಬರ್‌, 2019ರ ಜನವರಿಯಲ್ಲಿ(2 ಸಭೆ) ನಡೆದ ಸಭೆಗಳಿಗೆ ಗೈರು ಹಾಜರಾಗಿದ್ದರು. ಇವರ ವಿರುದ್ಧ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಸಿಇಒ ಶಿಫಾರಸ್ಸು ಮಾಡಿದ್ದರು. 

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993ರ ಪ್ರಕರಣ 43(ಎ) ಅಡಿ ಸದಸ್ಯತ್ವ ಕಳೆದುಕೊಂಡವರ ಪಟ್ಟಿಯಲ್ಲಿ ನರಸಿಂಹಯ್ಯ, ಜನಾರ್ದನಗೌಡ, ಸಿದ್ದಗಂಗಯ್ಯ, ಚಂದ್ರಮ್ಮ, ಭಾಗ್ಯಶ್ರೀ, ನಾಗಮಣಿ, ಎಚ್‌.ಡಿ.ಪ್ರಕಾಶ್‌ ಮತ್ತು ಗಂಗಮ್ಮ ಇದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು