ಬುಧವಾರ, ಮೇ 27, 2020
27 °C

ನಿಷೇಧಾಜ್ಞೆ ನಡುವೆಯೇ ಜಾಲಿರೈಡ್: ಅಪಘಾತದಲ್ಲಿ ನಟಿ ಶರ್ಮಿಳಾ ಮಾಂಡ್ರೆಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಶರ್ಮಿಳಾ ಮಾಂಡ್ರೆ– ಚಿತ್ರ ಕೃಪೆ: ಫೇಸ್‌ಬುಕ್‌

ಬೆಂಗಳೂರು: ಖಾಲಿ ರಸ್ತೆಯಲ್ಲಿ  ಜಾಲಿರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಡ್ರೆ ಕಾರು ಅಪಘಾತವಾಗಿದ್ದು, ಶರ್ಮಿಳಾ ಅವರೂ ಗಾಯಗೊಂಡಿದ್ದಾರೆ.

ನಗರದಲ್ಲಿ ನಿಷೇಧಾಜ್ಞೆ ಇದೆ. ಇದರ ನಡುವೆಯೇ ಶರ್ಮಿಳಾ ಸ್ನೇಹಿತರ ಜೊತೆ ಜಾಗ್ವಾರ್ ಕಾರಿನಲ್ಲಿ ಶುಕ್ರವಾರ ರಾತ್ರಿ ಸುತ್ತಾಡುತ್ತಿದ್ದರು.

ವಸಂತನಗರ ಕೆಳ ಸೇತುವೆಯಲ್ಲಿ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಫಘಾತದಲ್ಲಿ ಶರ್ಮಿಳಾ ಮಂಡ್ರೆ ಮುಖಕ್ಕೆ ಗಾಯವಾಗಿದ್ದು, ಸ್ನೇಹಿತನೊಬ್ಬನ ಕೈಗೆ ಪೆಟ್ಟು ಬಿದ್ದಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಜಾಗ್ವಾರ್‌ ಕಾರು

ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತನ ವಿರುದ್ಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪಾಸ್ ಇಲ್ಲದೆ ನಗರದಲ್ಲಿ ಯಾವುದೇ ವಾಹನ ಸಂಚರಿಸಬಾರದೆಂದು ಕಮಿಷನರ್ ಹೇಳಿದ್ದರು. ಆದರೆ, ಶರ್ಮಿಳಾ ನಿಯಮ ಉಲ್ಲಂಘಿಸಿ ಕಾರು ರಸ್ತೆಗೆ ತಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು