ಬೆಂಗಳೂರು: ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಅಂತ್ಯಕ್ರಿಯೆ ನಡೆಯಲಿದೆ.

10 ಕೆಜಿ ತುಪ್ಪ, 250 ಕೆ.ಜಿ ಗಂಧದ ಕಟ್ಟಿಗೆ ತರಲಾಗಿದ್ದು, ಹಾಲು, ಮೊಸರು, ಪಂಚಗವ್ಯ ಬಳಕೆ ಮಾಡಲಾಗುತ್ತದೆ. ಹೂವಿನ ಅಲಂಕಾರ ಹಾಗೂ ಪಾರ್ಥಿವ ಶರೀರದ ಬಾಯಲ್ಲಿ ಚಿನ್ನದ ನಾಣ್ಯ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹುಣಿಸೆ, ಅತ್ತಿ, ನೀಲಗಿರಿ, ಸರ್ವೆ ಕಟ್ಟಿಗೆಗಳನ್ನೂ ತರಲಾಗಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ನಾಲ್ಕು ಹಂತದಲ್ಲಿ ಚಿತೆಗೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಿದ್ಧತೆ ಪೂರ್ಣಗೊಂಡಿದೆ.

ನಾಗೇಶ್ ದೀಕ್ಷಿತ್ ನೇತೃತ್ವದಲ್ಲಿ ಅಂತ್ಯಕ್ರಿಯೆಗೂ ಪೂರ್ವ ವಿಧಿವಿಧಾನ ಆರಂಭವಾಗಿದೆ.

ಚಿತೆಗೆ ವೇದಿಕೆ

* ಮೊದಲ ಹಂತ 16*16; ಒಂದೂವರೆ ಅಡಿ ಆಳದ ಗುಂಡಿ ತೆಗೆದು ಅದಕ್ಕೆ ಕಾಂಕ್ರೀಟ್ ಹಾಕಲಾಗಿದೆ
* ಎರಡನೆ ಹಂತದಲ್ಲಿ 16 *16 ಅಡಿ ಭೂಮಿ ಮೇಲೆ ಕಟ್ಟೆ ನಿರ್ಮಿಸಲಾಗಿದೆ
* ಮೂರನೇ ಹಂತದಲ್ಲಿ 11*14 ಅಡಿ (ಎರಡು ಕೋರ್ಸ್ ಇಟ್ಟಿಗೆ ಗೋಡೆ)
* ನಾಲ್ಕನೇ ಹಂತದಲ್ಲಿ 9*11 ಅಡಿ ಗೋಡೆ( ಚಿತೆ ಜೋಡಿಸಲು) ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.