ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ: ವೈಜ್ಞಾನಿಕ ಬೆಲೆ ನಿಗದಿ ಮಾಡಿ

Last Updated 3 ಜೂನ್ 2020, 3:11 IST
ಅಕ್ಷರ ಗಾತ್ರ

ಉತ್ಪಾದಕರು, ವಿತರಕರ ಹಿತಾಸಕ್ತಿ ಕಾಯಲು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ವಿದ್ಯುತ್ ಉತ್ಪಾದನೆ, ಖರೀದಿಯ ವೆಚ್ಚ, ನಷ್ಟಗಳು ಏನೇ ಇದ್ದರೂ ಕಾಲಕಾಲಕ್ಕೆ ಸರ್ಕಾರಗಳು ರೈತರನ್ನು ಮೆಚ್ಚಿಸಲು ಅಥವಾ ಪ್ರಾಮಾಣಿಕವಾಗಿ ರೈತರಿಗೆ ಬೆಂಬಲ ನೀಡಲು ಸಬ್ಸಿಡಿ, ಉಚಿತ ವಿದ್ಯುತ್ ನೀಡುತ್ತ ಬಂದಿವೆ. ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಹತ್ತು ಎಚ್‌ಪಿವರೆಗೂ ಉಚಿತ ವಿದ್ಯುತ್ ನೀಡಿದ್ದರು. ನಂತರದ ಸರ್ಕಾರಗಳು ನಿರ್ಧಾರ ಬದಲಿಸುತ್ತ ಬಂದಿವೆ.

ತಿದ್ದುಪಡಿಗೆ ನಮ್ಮ ಅಭ್ಯಂತರ ಏನೂ ಇಲ್ಲ. ಅದೇ ರೀತಿ ಆಹಾರ ಉತ್ಪಾದನಾ ವಲಯಕ್ಕೂ ಕಾನೂನಿನ ಭದ್ರತೆ ನೀಡಬೇಕು. ವೆಚ್ಚದ ಆಧಾರದ ಮೇಲೆ ಪ್ರತಿಯೊಂದು ಬೆಳೆಗೂ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಅಲ್ಲಿಯವರೆಗೂ ಬೀಜ, ಗೊಬ್ಬರದ ಜತೆಗೆ ಕೃಷಿಗೆ ಪೂರೈಸುವ ವಿದ್ಯುತ್‌ಗೂ ಸಬ್ಸಿಡಿ, ಉಚಿತ ನೆರವು ನೀಡುತ್ತಿರಬೇಕು. ಅದು ಮುಲಾಜಿಗೆ, ಪ್ರಚಾರಕ್ಕೆ ಆಗಬಾರದು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ನಂತರ ಎಲ್ಲ ರಿಯಾಯಿತಿ, ಉಚಿತ ಘೋಷಣೆ ರದ್ದು ಮಾಡಬಹುದು.

-ಕೆ.ಟಿ.ಗಂಗಾಧರ್, ರೈತ ಮುಖಂಡರು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT