ಶುಕ್ರವಾರ, ಏಪ್ರಿಲ್ 3, 2020
19 °C
'ಪಾಕಿಸ್ತಾನ ಜಿಂದಾಬಾದ್‌' ಎಂದು ಘೋಷಣೆ ಕೂಗಿದ್ದ ಯುವತಿ 

ಪುತ್ರಿ ಅಮೂಲ್ಯಾ ವಿರುದ್ಧ ಕಾನೂನು ಕ್ರಮ ಜರುಗಿಸಲಿ: ವೊಲ್ಡಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಪುತ್ರಿ ಅಮೂಲ್ಯಾ ‘ಪಾಕಿಸ್ತಾನಕ್ಕೆ ಜಿಂದಾಬಾದ್‌’ ಎಂದು ಕೂಗಿರುವುದು ಖಂಡಿತಾ ತಪ್ಪು, ಅವಳು ಜೈಲಿನಲ್ಲಿಯೇ ಇರಲಿ ಎಂದು ಅಮೂಲ್ಯಾ ತಂದೆ ವೊಜಲ್ಡ್‌ ಹೇಳಿದ್ದಾರೆ. 

ಗುರುವಾರ ರಾತ್ರಿ ಮನೆಗೆ ಬಂದಿದ್ದ ಬಜರಂಗದಳದ ಕಾರ್ಯಕರ್ತರೊಂದಿಗೆ ವೊಜಲ್ಡ್‌  ಮಾತನಾಡಿ, ‘ಭಾರತ್‌ ಮಾತಾ ಕಿ ಜೈ… ಭಾರತ್‌ ಮಾತಾ ಕಿ ಜೈ … ಪೊಲೀಸರು ಪುತ್ರಿಯ ಕೈಕಾಲು ಮುರಿಯಲಿ, ನಮ್ಮದೇನು ಅಭ್ಯಂತರ ಇಲ್ಲ’ ಎಂದಿದ್ದಾರೆ. 

ಇದನ್ನೂ ಓದಿ... ಬೆಂಗಳೂರಿನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

‘ಅಮೂಲ್ಯಾ ಈ ರೀತಿ ಮಾತಾಡಬಾರದು ಎಂದು ಹೇಳಿದ್ದೆ. ವಿದೇಶದಿಂದ ಬಂದಿದ್ದ ನನ್ನನ್ನ ತಮ್ಮನೂ ಬುದ್ಧಿವಾದ ಹೇಳಿದ್ದ. ಆಕೆ ಕೇಳುತ್ತಿರಲಿಲ್ಲ. ಕುಟುಂಬದವರಿಗೆ ಬಹಳ ಬೇಸರ ಮಾಡಿಸಿದ್ದಾಳೆ. ಪುತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ’ ಎಂದು ಹೇಳಿದ್ದಾರೆ. 

ಬಜರಂಗದಳವರು ಅಮೂಲ್ಯಾ ಮನೆಗೆ ಹೋಗಿ ವೊಜಲ್ಡ್‌ ಅವರ ಜತೆ ಮಾತುಕತೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ... ‘ಪಾಕಿಸ್ತಾನ ಜಿಂದಾಬಾದ್‌’ ಕೂಗಿದ್ದು ಕಾಫಿನಾಡಿನ ಗುಬ್ಬಗದ್ದೆ ಯುವತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು