ಮಂಗಳವಾರ, ಆಗಸ್ಟ್ 20, 2019
22 °C

ಅಧಿವೇಶನಕ್ಕೆ ಹಾಜರಿ, ಕಾದು ನೋಡಿ: ಶಾಸಕ ಆನಂದ್‌ ಸಿಂಗ್‌

Published:
Updated:
Prajavani

ಹೊಸಪೇಟೆ: ‘ವಿಶ್ವಾಸಮತಯಾಚನೆ ಮೇಲೆ ಸೋಮವಾರ ನಡೆಯಲಿರುವ ವಿಧಾನಸಭೆ ಅಧಿವೇಶನದ ಚರ್ಚೆಗೆ ಹಾಜರಾಗುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಿ’ ಎಂದು ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಈಗ ನಾನೇನೂ ಹೇಳಲಾರೆ. ನಾಳೆ ಕಾದು ನೋಡಿ ಎಂದಷ್ಟೇ’ ಹೇಳಿದರು.

‘ನಾನು ಕಾಣೆಯಾಗಿಲ್ಲ. ಅನಾರೋಗ್ಯದ ನಿಮಿತ್ತ ನನ್ನ ತಂದೆ ಪೃಥ್ವಿರಾಜ್‌ ಸಿಂಗ್‌ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಅವರೊಂದಿಗೆ ಅಲ್ಲಿಯೇ ಇದ್ದೆ. ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ನಾನು ಕಾಣೆಯಾಗಿದ್ದೇನೆ ಎಂದು ಕೆಲವರು ಠಾಣೆಗೆ ದೂರು ಕೊಟ್ಟಿದ್ದರು. ಆ ಠಾಣೆಗೆ ಭಾನುವಾರ ರಾತ್ರಿ ನಾನೇ ಖುದ್ದಾಗಿ ಹೋಗಿ ದಾಖಲೆಗಳನ್ನು ಕೊಟ್ಟಿರುವೆ’ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ... ಮೈತ್ರಿ ಸರ್ಕಾರ ಪತನಕ್ಕೂ ಮುನ್ನವೇ ಮಂತ್ರಿಗಿರಿಗೆ ಬಿಜೆಪಿ ಶಾಸಕರ ಲೆಕ್ಕಾಚಾರ

‘ವ್ಯಾಸರಾಯರ ವೃಂದಾವನ ಹಾಳು ಮಾಡಿರುವ ದುಷ್ಕೃತ್ಯ ಖಂಡನಾರ್ಹವಾದುದು. ವಿಷಯ ತಿಳಿದು ಮನಸ್ಸಿಗೆ ಬಹಳ ನೋವಾಯಿತು. ಪವಿತ್ರ ಸ್ಥಳವನ್ನು ಈ ರೀತಿ ಹಾಳುಗೆಡವಿರುವುದು ಸರಿಯಲ್ಲ. ಕೃತ್ಯ ಎಸಗಿದವರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷಿಸಬೇಕು. ವೃಂದಾವನಕ್ಕೆ ಭೇಟಿ ನೀಡಿ ಅಲ್ಲಿನ ಯತಿಗಳನ್ನು ಭೇಟಿ ಮಾಡಿ ಬಂದಿರುವೆ’ ಎಂದು ತಿಳಿಸಿದರು.

ಇವನ್ನೂ ಓದಿ...

ಮಹಾರಾಷ್ಟ್ರ ಸರ್ಕಾರದಿಂದ ನಮ್ಮ ಶಾಸಕರ ಬಂಧನ: ಶಾಸಕ ಅನ್ನದಾನಿ ಆರೋಪ

ಕುಮಾರಸ್ವಾಮಿ ಜನರ ಭಾವನೆ ತಿಳಿದು ನಡೆಯಬೇಕು: ಸಂಸದ ಜಾಧವ್

Post Comments (+)