ಶನಿವಾರ, ಜನವರಿ 18, 2020
19 °C

ರಮಾಗೋವಿಂದ ಪುರಸ್ಕಾರ ಪ್ರದಾನ ಜನವರಿ 5ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರಿನ ಡಿ. ರಮಾಬಾಯಿ ಚಾರಿಟಬಲ್ ಫೌಂಡೇಶನ್ ಮತ್ತು ಎಂ. ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ 2020ನೇ ಸಾಲಿನ ‘ರಮಾಗೋವಿಂದ ಪುರಸ್ಕಾರ’ಕ್ಕೆ ಗದಗ ಜಿಲ್ಲೆಯ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಹಾಗೂ ಉತ್ತರಕನ್ನಡ ಜಿಲ್ಲೆ ಕೆರೆಮನೆಯ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ‌ ಆಯ್ಕೆಯಾಗಿವೆ.

ಪ್ರಶಸ್ತಿಯು ತಲಾ ₹ 5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಸಾಧಕ ವ್ಯಕ್ತಿಗಳಿಗೆ ನೀಡಲಾಗುವ ಪುರಸ್ಕಾರಕ್ಕೆ ದೆಹಲಿಯ ಓಂಕಾರನಾಥ ಶರ್ಮಾ (ಮೆಡಿಸಿನ್‌ ಬಾಬಾ), ಮೈಸೂರಿನ ವೈದ್ಯ ಡಾ.ಕೆ.ಆರ್‌.ಕಾಮತ್‌, ಸಂಗೀತ ಸಂಘಟಕ ಹಿಮಾಂಶು ಪಾತ್ರರಾಗಿದ್ದು, ಪ್ರಶಸ್ತಿ ತಲಾ ₹3 ಲಕ್ಷ ನಗದು ಒಳಗೊಂಡಿದೆ. ಜ.5ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಫೌಂಡೇಶನ್‌ ಟ್ರಸ್ಟಿ ಎಂ.ಜಗನ್ನಾಥ ಶೆಣೈ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನ ಓದು ಕಡ್ಡಾಯ
ಬೆಂಗಳೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ಬೆಳಿಗ್ಗೆ ಪ್ರಾರ್ಥನೆ ಸಮಯದಲ್ಲಿ ಸಂವಿಧಾನವನ್ನು ಓದುವುದು ಮತ್ತು ಉಪಸ್ಥಿತರಿರುವ ಎಲ್ಲರೂ ಪುನರುಚ್ಚರಿಸುವುದು ಕಡ್ಡಾಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.‌ ತಜ್ಞರನ್ನು ಆಹ್ವಾನಿಸಿ, ಉಪನ್ಯಾಸಗಳನ್ನು ಏರ್ಪಡಿಸಬೇಕು ಎಂದು ಸೂಚಿಸಲಾಗಿದೆ.

ಪ್ರತಿಕ್ರಿಯಿಸಿ (+)