ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆ: ನಿಷ್ಕ್ರಿಯ ಪ್ರಕ್ರಿಯೆ ಆರಂಭ

Last Updated 20 ಜನವರಿ 2020, 11:59 IST
ಅಕ್ಷರ ಗಾತ್ರ
ADVERTISEMENT
""

ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆಬ್ಯಾಗ್‌ನಲ್ಲಿಸುಧಾರಿತ ಬಾಂಬ್‌ಗಳು ಪತ್ತೆಯಾಗಿದ್ದುಬಾಂಬ್ ನಿಷ್ಕ್ರಿಯ ದಳದ ತಜ್ಞ ಸಿಬ್ಬಂದಿಗಳು ಬಾಂಬ್‌ನಿಷ್ಕ್ರಿಯ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಸ್ಫೋಟಕ ಇರುವ ಬ್ಯಾಗ್ ಸಮೇತ ಬಾಂಬ್ ನಿಷ್ಕ್ರಿಯ ದಳದ ವಾಹನವನ್ನು ಇಲ್ಲಿನ ಕೆಂಜಾರು ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮರಳಿನ ಚೀಲಗಳನ್ನು ಪೇರಿಸಿದ್ದುತಜ್ಞ ಸಿಬ್ಬಂದಿಗಳು ಬಾಂಬ್‌ ನಿಷ್ಕ್ರಿಯ ಪ್ರಕ್ರಿಯೆ ನಡೆಸುತ್ತಿದ್ದಾರೆ.

ಬಾಂಬ್ ಇರುವ ಚೀಲವನ್ನು ತೆರೆಯುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಟೈಮರ್ ಸಂಪರ್ಕ ಸ್ಥಗಿತವಾಗಿರುವ ಕಾರಣದಿಂದ ಚೀಲವನ್ನೇ ಸ್ಫೋಟಿಸಲು ಸಿದ್ಧತೆ ನಡೆಸಲಾಗಿದೆ.

ಸುಮಾರು 350 ಮೀಟರ್ ದೂರದಲ್ಲಿ ವೈರ್ ಬಳಸಿ ಸ್ಫೋಟಿಸಲಾಗುತ್ತಿದೆ. ಮಂಗಳೂರು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ವೈರ್ ಮೂಲಕ ಸ್ಫೋಟಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದಕ್ಕೂ ಮೊದಲುಬಾಂಬ್ ನಿಷ್ಕ್ರಿಯ ಯಂತ್ರವನ್ನು ಹೊತ್ತು ತಂದಿರುವ ಟ್ರ್ಯಾಕ್ಟರ್ ಅನ್ನು ಕೆಳಕ್ಕಿಳಿಸುವಾಗ ಅಡಚಣೆ ಉಂಟಾಯಿತು. ನಂತರಕ್ರೇನ್ ನೆರವಿನಲ್ಲಿ ಹೆದ್ದಾರಿ ಕೆಳಕ್ಕೆ ಇಳಿಸಲಾಯಿತು. ಇದೀಗ ಬಾಂಬ್‌ ನಿಷ್ಕ್ರಿಯ ಪ್ರಕ್ರಿಯೆ ನಡೆಸುತ್ತಿದ್ದಾರೆ.

ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಬ್ಯಾಗ್ ಪತ್ತೆಯಾಗಿತ್ತು. ಬ್ಯಾಗ್‌ ಗಮನಿಸಿದನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಶಂಕಾಸ್ಪದ ಬ್ಯಾಗ್‌ ಅನ್ನು ಇರಿಸಲಾಗಿರುವ ಬಾಂಬ್‌ ನಿಷ್ಕ್ರೀಯಗೊಳಿಸುವ ವಾಹನ

ಲ್ಯಾಪ್ ಟಾಪ್ ಬ್ಯಾಗ್‌ನಂತಿರುವ ವಸ್ತುವನ್ನುಬಾಂಬ್ ನಿಷ್ಕ್ರಿಯ ದಳದ ವಾಹನದೊಳಕ್ಕೆ ಸಾಗಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ವಿಮಾನ ನಿಲ್ದಾಣದ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ.

ಅಪರಿಚಿತ ವ್ಯಕ್ತಿಗಳು ಆಟೊ ರಿಕ್ಷಾದಲ್ಲಿ ಬಂದು ಬ್ಯಾಗ್ ಇರಿಸಿ ಹೋಗಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT