ಮಂಗಳವಾರ, ಫೆಬ್ರವರಿ 18, 2020
24 °C

ಸೈನಿಕರ ಸಮಾಧಿ ಮೇಲೆ ರಾಜಕೀಯ ಮಾಡುವುದಿಲ್ಲ: ಸಚಿವ ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‘ಪುಲ್ವಾಮಾ ಘಟನೆ ಬಗ್ಗೆ ರಾಹುಲ್‌ಗಾಂಧಿ ಅವರ ಹೇಳಿಕೆ ಬಾಲಿಶವಾದುದು. ವೀರ ಸೈನಿಕರನ್ನು ಬಲಿಕೊಟ್ಟು ರಾಜಕಾರಣ ಮಾಡುವ ಅಗತ್ಯ ಬಿಜೆಪಿಗಿಲ್ಲ‘ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು. 

ಕೃಷಿ ಸಚಿವನಾದ ನಂತರ ಹಿರೇಕೆರೂರಿಗೆ ಪ್ರಥಮ ಬಾರಿಗೆ ಬರುವ ಮಾರ್ಗ ಮಧ್ಯೆ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಹುಲ್‌ ಗಾಂಧಿ ಹೇಳಿಕೆ ಅವರ ಪ್ರಬುದ್ಧತೆ ಎಷ್ಟು ಎಂಬುದನ್ನು ತೋರಿಸುತ್ತದೆ. ಯಾರೂ ಸಾವಿನ ಜೊತೆ ಸರಸವಾಡುವುದಿಲ್ಲ. ಸೈನಿಕರ ಸಮಾಧಿ ಮೇಲೆ ರಾಜಕಾರಣ ಮಾಡುವ ಉದ್ದೇಶ ಯಾರಿಗೂ ಇರುವುದಿಲ್ಲ. ಹಾಗೆ ರಾಹುಲ್‌ ಗಾಂಧಿ ಭಾವಿಸಿದ್ದರೆ, ಅವರ ಮೂರ್ಖತನದ ಪರಮಾವಧಿ ಎಂದು ತಿರುಗೇಟು ನೀಡಿದರು. 

17 ಜನರಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಕಳಕಳಿ ಇದೆ. ಯಾರಿಗೂ ಅನ್ಯಾಯ ಮಾಡುವುದಿಲ್ಲ. ಅವರ ಹಿತರಕ್ಷಿಸುವ ಕೆಲಸವನ್ನು ಬಿ.ಎಸ್‌. ಯಡಿಯೂರಪ್ಪ ಮಾಡಲಿದ್ದಾರೆ ಎಂದರು. 

ಅತಿವೃಷ್ಟಿ ಪರಿಹಾರ ವಿತರಣೆಯಲ್ಲಿ ಗೋಲ್‌ಮಾಲ್‌ ನಡೆದಿರುವುದನ್ನು ಗಮನಕ್ಕೆ ತಂದರೆ, ಅದನ್ನು ಸರಿಪಡಿಸಲಾಗುವುದು. ರೈತರಿಗೆ ಅನ್ಯಾಯವಾಗಿದ್ದರೆ ಖಂಡಿತ ನ್ಯಾಯ ಒದಗಿಸಲಾಗುವುದು ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು