ದೂರು ನೀಡಲು ಆಯೋಗದ ಸಿ– ವಿಜಿಲ್‌ ಆ್ಯಪ್‌

ಗುರುವಾರ , ಮಾರ್ಚ್ 21, 2019
32 °C

ದೂರು ನೀಡಲು ಆಯೋಗದ ಸಿ– ವಿಜಿಲ್‌ ಆ್ಯಪ್‌

Published:
Updated:

ಬೆಂಗಳೂರು: ಚುನಾವಣೆ ಸಂಬಂಧಿಸಿ ಅಕ್ರಮಗಳ ದೂರು ನೀಡಲು ಆಯೋಗವು ಸಿ– ವಿಜಿಲ್‌ ಎಂಬ ಮೊಬೈಲ್‌ ಆ್ಯಪ್‌ ರೂಪಿಸಿದೆ. ಇದರಲ್ಲಿ ಅಕ್ರಮಗಳು ನಡೆಯುತ್ತಿದ್ದಲ್ಲಿ ಅದರ ವಿವರಗಳನ್ನು ನೀಡಬಹುದು.

ದೂರು ನೀಡಿದ 100 ನಿಮಿಷಗಳ ಒಳಗೆ ಸಂಬಂಧಿಸಿದ ವಿಚಕ್ಷಣಾ ದಳದವರು ಸ್ಥಳಕ್ಕೆ ಭೇಟಿ ನೀಡಿ ಕೈಗೊಂಡ ಕ್ರಮದ ಬಗ್ಗೆ ಆಯೋಗಕ್ಕೆ ವರದಿ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದರು. 

ಇದನ್ನೂ ಓದಿ: ‘ಪ್ರಜಾಮತ’ಕ್ಕೆ ಮುಹೂರ್ತ: 7 ಹಂತಗಳಲ್ಲಿ ಚುನಾವಣೆ, ಮೇ 23ರಂದು ಫಲಿತಾಂಶ

ಹೇಗೆ ಕಾರ್ಯನಿರ್ವಹಣೆ?: ವಿಚಕ್ಷಣ ದಳದ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಿರಲಾಗುತ್ತದೆ. ದೂರು ಬಂದ ತಕ್ಷಣ ಸಂಬಂಧಿಸಿದ ಸ್ಥಳದ ಅತ್ಯಂತ ಸಮೀಪವಿರುವ ತಂಡಕ್ಕೆ ಮಾಹಿತಿ ರವಾನೆಯಾಗುತ್ತದೆ.

ದೂರು ಸಲ್ಲಿಕೆಯಾದ 15 ನಿಮಿಷಗಳ ಒಳಗೆ ಅವರು ಸ್ಥಳ ತಲುಪಬೇಕು. ಬಳಿಕ ವಿಷಯ ಪರಿಶೀಲಿಸಿಕ್ರಮ ಕೈಗೊಳ್ಳಬೇಕು. ಸಹಾಯವಾಣಿ 1950 ಮೂಲಕವೂ ದೂರು ನೀಡಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿಮೊದಲ ಹಂತದ ಚುನಾವಣೆ: ಸತತ ರಜೆ!

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !