ಭಾನುವಾರ, ಜನವರಿ 19, 2020
24 °C

ಪಶ್ಚಾತಾಪಪಟ್ಟರೆ ಅಮಾನತು ಹಿಂದಕ್ಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಕ್ಕೆಲುಬು’ ವಿಡಿಯೊ ಕುಖ್ಯಾತಿಯ ಶಿಕ್ಷಕ ತಾನು ಮಾಡಿದ ಹೀನ ಕೃತ್ಯಕ್ಕೆ ಪಶ್ಚಾತಾಪಪಟ್ಟರೆ ಮಾತ್ರ ಶಿಕ್ಷಣ ಇಲಾಖೆ ಅಮಾನತು ಆದೇಶ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ಈ ಕುರಿತು ಸುಳಿವು ನೀಡಿದ್ದಾರೆ.

ಈ ಸಂಬಂಧ ‘ಫೇಸ್‌ಬುಕ್‌’ ಮೂಲಕ ಸಚಿವ ಸುರೇಶ್‌ ಕುಮಾರ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆ ಶಿಕ್ಷಕ ಇವತ್ತು ನನ್ನನ್ನು ಭೇಟಿಯಾಗಲು ಬಂದಿದ್ದರು. ಆದರೆ, ಅವರಲ್ಲಿ ತಾವು ಮಾಡಿದ ಕೃತ್ಯದ ಬಗ್ಗೆ ಪಶ್ಚಾತಾಪದ ಲವಲೇಶವೂ ಕಂಡುಬರಲಿಲ್ಲ. ಅಮಾನತು ಆದೇಶ ರದ್ದು ಎಂಬ ಕಾರಣಕ್ಕೆ ತಪ್ಪಾಗಿದೆ ಎಂದು ಔಪಚಾರಿಕವಾಗಿ ಹೇಳಿದರು. ಅವರಲ್ಲಿ ಪ್ರಾಮಾಣಿಕತೆ ಕಂಡುಬರಲಿಲ್ಲ ಎಂದು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು