ಸೋಮವಾರ, ಅಕ್ಟೋಬರ್ 21, 2019
24 °C

ಬಿಜೆಪಿಯ 6 ಸದಸ್ಯರು ಕಾಂಗ್ರೆಸ್‌ ಸಂಪರ್ಕದಲ್ಲಿ: ಕಾಂಗ್ರೆಸ್‌ ಸದಸ್ಯ ವಾಜಿದ್‌

Published:
Updated:

ಬೆಂಗಳೂರು: ಬಿಜೆಪಿಯ ಆರು ಮಂದಿ ಪಾಲಿಕೆ ಸದಸ್ಯರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದಾರೆ ಎಂದು ಆಡಳಿತ ಪಕ್ಷ ಕಾಂಗ್ರೆಸ್‌ನ ಅಬ್ದುಲ್‌ ವಾಜಿದ್‌ ಅವರು ಬಾಂಬ್‌ ಸಿಡಿಸಿದ್ದಾರೆ.

ಪಾಲಿಕೆ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾಲಿಕೆಯ ಕಾಂಗ್ರೆಸ್‌ ನಾಯಕ ವಾಜಿದ್‌, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸಿದೆ. ಹೀಗಾಗಿ ಅವರ ಅಭ್ಯರ್ಥಿಯ ಬಗ್ಗೆ ಅಲ್ಲಿನ ಸದಸ್ಯರು ಗೊಂದಲಗೊಂಡಿದ್ದಾರೆ. ಹೀಗಾಗಿ ನಾವು ಮತ್ತೊಮ್ಮೆ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ. ನಮಗೆ ಕೊರತೆಯಾಗಿದ್ದದ್ದು ಎರಡು ವೋಟುಗಳು ಮಾತ್ರ. ಆದರೆ, ಈಗ 6 ಮಂದಿ ಬಿಜೆಪಿ ಸದಸ್ಯರು ನಮ್ಮ ಸಂಪರ್ಕ ಬಂದಿದ್ದಾರೆ ಎಂದಿದ್ದಾರೆ. 

ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ಮೇಯರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಕೆಲ ಕಾಲ ಗೊಂದಲ ಏರ್ಪಟ್ಟಿತ್ತು. 

Post Comments (+)