ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟಿನ್‌ ಮುಚ್ಚಬೇಡಿ, ಸರ್ಕಾರಕ್ಕೆ ಸಂಪೂರ್ಣ ಸಹಕಾರ–ಕಾಂಗ್ರೆಸ್‌

ಕೋವಿಡ್‌–19
Last Updated 27 ಮಾರ್ಚ್ 2020, 9:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದುಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು, ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಶುಕ್ರವಾರ ತಿಳಿಸಿದ್ದಾರೆ.

ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ಧರಾಮಯ್ಯ ಮಾತನಾಡಿದರು.

ಆಡಳಿತ ಸರ್ಕಾರ ಇಲ್ಲಿಯವರೆಗೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು, ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.ಪ್ರತಿ ಶಾಸಕರು ಮತ್ತು ಪರಿಷತ್‌ ಸದಸ್ಯರು ಒಂದು ಲಕ್ಷ ದೇಣಿಗೆನೀಡಬೇಕು,ಇರುವವರು ಹೆಚ್ಚಿಗೆ ಕೊಟ್ಟರೂ ಪರವಾಗಿಲ್ಲ,ಇದನ್ನುನಾವು ಕೊರೊನಾ ಸೋಂಕಿತರಿಗೆ ಬಳಸಿಕೊಳ್ಳುತ್ತೇವೆ. ನಮ್ಮ ಕಾರ್ಯಕರ್ತರು ನೇರವಾಗಿ ಜನರ ಬಳಿ ಹೋಗಬಾರದುಎಂದು ಸಿದ್ದರಾಮಯ್ಯ ಮನವಿಮಾಡಿದರು.

ಕೊರೊನಾ ವೈರಸ್‌ ಎಲ್ಲಾ ಕಡೆ ಹಬ್ಬಿಜನರನ್ನು ಭಯಬೀತಗೊಳಿಸಿ,ಆತಂಕಕ್ಕೀಡುಮಾಡಿದೆ. ಪ್ರಧಾನಿಯವರು 21ದಿನ ದೇಶವನ್ನು ಲಾಕ್ ಡೌನ್ ಮಾಡಿದ್ದಾರೆ. ಇದನ್ನ ನಮ್ಮ ಪಕ್ಷ ಸ್ವಾಗತಿಸಿದ್ದುಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ.ತಡವಾಗಿಯಾದರೂ ಸರ್ಕಾರ ಉತ್ತಮ ನಿರ್ಧಾರ ಮಾಡಿದೆ, ಕೊರೊನಾ ವೈರಸ್‌ಗೆ ಔಷಧಿಯೇ ಇಲ್ಲ,ಅದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಅವರಿಗೆ ಪತ್ರ ಬರೆದು ಅವರನಿಲುವನ್ನುಅಭಿನಂದಿಸಿ ಸಲಹೆ ಕೊಟ್ಟಿದ್ದಾರೆ. ಚಿದಂಬರಂ ಕೂಡ 10ಸಲಹೆಗಳನ್ನ ಕೇಂದ್ರಕ್ಕೆ ಕೊಟ್ಟಿದ್ದಾರೆ. ಹಣಕಾಸು ಸಚಿವೆನಿರ್ಮಲಾ ಸೀತಾರಾಮನ್ ನಿನ್ನೆ ಮಾಡಿದ ಘೋಷಣೆಗಳು ಹಾಗೂ ರಿಸರ್ವ್‌ ಬ್ಯಾಂಕ್ ಗೌವರ್ನರ್‌ ಅವರು ಮೂರು ತಿಂಗಳ ವಿವಿಧ ಸಾಲಗಳ ಕಂತನ್ನು (ಇಎಂಐ )ಮುಂದೂಡಿದ್ದನ್ನು ಸ್ವಾಗತಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರೈತರ ಬೆಳೆಗಳನ್ನು ಹಾಪ್‌ಕಾಮ್ಸ್‌ ಮೂಲಕ ಖರೀದಿಸಬೇಕು ಹಾಗೂ ರೇಷ್ಮೆ ಗೂಡನ್ನ ಖರೀದಿಸಬೇಕು. ನಿರ್ಗತಿಕರು, ಬಡವರಿಗಾಗಿಯೇ ಆರಂಭಿಸಿರುವ ಇಂದಿರಾ ಕ್ಯಾಂಟಿನ್‌ಗಳನ್ನು ಮುಚ್ಚಬಾರದುಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಹೆಲ್ಪ್‌ಲೈನ್‌: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಪಕ್ಷದ ಕಡೆಯಿಂದ ಹೆಲ್ಪ್‌ಲೈನ್‌ ಆರಂಭ ಮಾಡಿ, ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುತ್ತೇವೆ ಎಂದರು.ರಮೇಶ್ ಕುಮಾರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚಿಸಿದ್ದೇವೆ. ಈ ಟಾಸ್ಕ್ ಪೋರ್ಸ್ ಕೊರೊನಾ ಸೋಂಕಿತ ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಿಕೊಡಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT