ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20: ಮನೆಗೆಲಸ ಮಾಡುವ ಮಹಿಳೆಗೆ ಸೋಂಕು

Last Updated 21 ಮಾರ್ಚ್ 2020, 15:28 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 20ಕ್ಕೆಏರಿಕೆಯಾಗಿದೆ. ಶನಿವಾರ ಒಂದೇ ದಿನ ಐದುಜನರಲ್ಲಿಕೋವಿಡ್‌–19 ದೃಢಪಟ್ಟಿದೆ.

ಮೈಸೂರಿನಲ್ಲಿ 35 ವರ್ಷ ವಯಸ್ಸಿನವ್ಯಕ್ತಿಗೆಕೋವಿಡ್‌–19 ದೃಢಪಟ್ಟಿದ್ದು, ಜಿಲ್ಲೆಯಲ್ಲಿಮೊದಲ ಪ್ರಕರಣ ದಾಖಲಾಗಿದೆ. ಮೆಕ್ಕಾ ಪ್ರವಾಸದಿಂದ ಚಿಕ್ಕಬಳ್ಳಾಪುರಕ್ಕೆ ಹಿಂದಿರುಗಿದ್ದ 31 ವರ್ಷ ವಯಸ್ಸಿನ ವ್ಯಕ್ತಿಸೋಂಕು ದೃಢಪಟ್ಟಿದೆ.

ಕೋವಿಡ್–19 ದೃಢಪಟ್ಟಿರುವ'ರೋಗಿ 11' ಅವರ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 53 ವರ್ಷದ ಮಹಿಳೆಗೆ ಸೋಂಕು ಇರುವುದು ಖಚಿತವಾಗಿದೆ. ನೆದರ್‌ಲೆಂಡ್‌ನಿಂದ ಬಂದ39 ವರ್ಷ ವಯಸ್ಸಿನ ವ್ಯಕ್ತಿ ಹಾಗೂ ಸ್ಕಾಟ್‌ಲೆಂಡ್‌ ಹಿಂದಿರುಗಿರುವ 21ರ ಯುವಕ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ.

ಭಾರತದಲ್ಲಿ ಸದ್ಯ ಕೋವಿಡ್‌ ಸೋಂಕು ದೃಢಪಟ್ಟಿರುವವರ ಸಂಖ್ಯೆ 298ಮುಟ್ಟಿದೆ. ಈ ಪೈಕಿಐವರು ಬಲಿಯಾಗಿದ್ದು, 22 ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಬಹುತೇಕ ಕಾರ್ಯಾಚರಣೆಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ. ಜನರು ಗುಂಪು ಗೂಡದರಿರುವುದು, ಅನಗತ್ಯ ಸಂಚಾರ ನಿಲ್ಲಿಸುವುದು ಹಾಗೂ ಮನೆಯಲ್ಲಿಯೇ ಉಳಿಯುವ ಮೂಲಕ ಸೋಂಕು ವ್ಯಾಪಿಸುವುದನ್ನು ತಡೆಯುವಂತೆ ಸರ್ಕಾರ ಸಲಹೆ ನೀಡುತ್ತಿದೆ.

ಜಗತ್ತಿನಾದ್ಯಂತ ಕೊರೊನಾ ಸೋಂಕು ಪೀಡಿತರ ಸಂಖ್ಯೆ 2,82,395ಕ್ಕೆ ಏರಿದ್ದು, ಒಟ್ಟು11,822 ಮಂದಿ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT