ಬೆಂಗಳೂರು: ಮೇ 6ರ ಸಂಜೆ 5 ಗಂಟೆಯಿಂದ ಮೇ 7ರ ಸಂಜೆ 5ಗಂಟೆವರೆಗೂ ರಾಜ್ಯದಲ್ಲಿ 12ಹೊಸ ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರತಿಳಿಸಿದೆ.

ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ಪ್ರಸ್ತುತ 308 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಪ್ರಕರಣಗಳ ಪೈಕಿ 30 ಮಂದಿ ಸಾವಿಗೀಡಾಗಿದ್ದು, 366ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ದಾವಣಗೆರೆಯ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಹೊಸದಾಗಿ ಸೋಂಕುದೃಢಪಟ್ಟವರ ಪೈಕಿ ಬೆಂಗಳೂರು ನಗರ, ಧಾರವಾಡ ಹಾಗೂ ಬೆಳಗಾವಿ(ಹಿರೇ ಬಾಗೇವಾಡಿ)ಯ ತಲಾ 1 ಪ್ರಕರಣಗಳು ಸೇರಿವೆ. ಉಳಿದಂತೆ ಕಲಬುರ್ಗಿ, ಬಾಗಲಕೋಟೆಯ ಬಾದಾಮಿ ಹಾಗೂದಾವಣಗರೆಯಲ್ಲಿ ತಲಾ 3 ಹೊಸಪ್ರಕರಣಗಳು ಪತ್ತೆಯಾಗಿವೆ.

ಬಾಗಲಕೋಟೆ: ಅರ್ಧ ಶತಕ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬಾದಾಮಿ ತಾಲೂಕಿನ ಢಾಣಕ ಶಿರೂರು ಗ್ರಾಮದ ಮೂವರು ಮಹಿಳೆಯರಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕ (51) ದಾಟಿದೆ.

ಈ ಮೊದಲು 21 ವರ್ಷದ ಗರ್ಭಿಣಿ, 10 ವರ್ಷದ ಬಾಲಕ ಸೇರಿದಂತೆ 13 ಮಂದಿಗೆ ಸೋಂಕು ದೃಢಪಟ್ಟಿತ್ತು. ಇವರೊಂದಿಗೆ ಗ್ರಾಮದಲ್ಲಿ ಒಟ್ಟು 16 ಮಂದಿಗೆ ಸೋಂಕು ತಗುಲಿದಂತಾಗಿದೆ. ಗುರುವಾರ ಸೋಂಕು ತಗುಲಿದವರಲ್ಲಿ 55 ವರ್ಷದ ಮಹಿಳೆ (ರೋಗಿ 702), 80 ವರ್ಷದ ವೃದ್ಧೆಗೆ (ರೋಗಿ ಸಂಖ್ಯೆ 703),19ವರ್ಷದ ಯುವತಿಗೆ (ರೋಗಿ ಸಂಖ್ಯೆ 704) ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.