ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update:ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆ,386 ಮಂದಿ ಗುಣಮುಖ

Last Updated 9 ಮೇ 2020, 12:46 IST
ಅಕ್ಷರ ಗಾತ್ರ

ಬೆಂಗಳೂರು: ಮೇ 8ರ ಸಂಜೆ 5 ಗಂಟೆಯಿಂದ ಮೇ 9ರ ಸಂಜೆ 5 ಗಂಟೆವರೆಗೂ ರಾಜ್ಯದಲ್ಲಿ 41 ಹೊಸ ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ತಿಳಿಸಿದೆ.

ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 794ಕ್ಕೆ ಏರಿಕೆಯಾಗಿದೆ. ಪ್ರಸ್ತುತ 371 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟು ಪ್ರಕರಣಗಳ ಪೈಕಿ 30 ಮಂದಿ ಸಾವಿಗೀಡಾಗಿದ್ದು, 386 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹೊಸದಾಗಿ ಇಂದು ಬೆಂಗಳೂರಿನಲ್ಲಿ 12 ಮಂದಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದಂತೆ ದಾವಣಗೆರೆಯಲ್ಲಿ 5, ಭಟ್ಕಳ (ಉತ್ತರ ಕನ್ನಡ) 8, ಭಂಟ್ವಾಳ (ದಕ್ಷಿಣ ಕನ್ನಡ) 3, ಚಿತ್ರದುರ್ಗ 3, ಬೀದರ್‌ 3, ತುಮಕೂರು 4, ವಿಜಯಪುರ, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಭಟ್ಕಳದಲ್ಲಿ ಮತ್ತೊಬ್ಬರು ಮಹಿಳೆಗೆ ಕೋವಿಡ್ ದೃಢ
ಕಾರವಾರ:
ಭಟ್ಕಳದಲ್ಲಿ ಶನಿವಾರ ಮತ್ತೊಬ್ಬರು ಮಹಿಳೆಗೆ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈಗ 21 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 32ಕ್ಕೇರಿದೆ.

ಆರೋಗ್ಯ ಇಲಾಖೆ ಸಂಜೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ 32 ವರ್ಷದ ಮಹಿಳೆಗೆ (ರೋಗಿ ಸಂಖ್ಯೆ791) ಸೋಂಕು ಖಚಿತವಾಗಿದ್ದಾಗಿ ತಿಳಿಸಲಾಗಿದೆ.ಅವರು 750ನೇ ಸಂಖ್ಯೆಯ ರೋಗಿಯ ಸಂಪರ್ಕಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT