ಶುಕ್ರವಾರ, ಜೂನ್ 18, 2021
24 °C

ಗೋಕರ್ಣ: ಐದು ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕರ್ಣ: ಇಲ್ಲಿಯ ತಾರಮಕ್ಕಿಯಲ್ಲಿ  ಮನೆಯೊಂದರ ಗೋದಾಮಿನಲ್ಲಿದ್ದ ಐದು ಸಿಲಿಂಡರ್‌ಗಳು ಸೋಮವಾರ ಸ್ಫೋಟಗೊಂಡಿವೆ. ಇದರ ಪರಿಣಾಮ ಮನೆ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಜೀವಹಾನಿಯಾಗಿಲ್ಲ.

ನಾಗರಾಜ ಸಾನು ಎಂಬುವವರ ಮನೆಯಲ್ಲಿ ಅವಘಡ ನಡೆದಿದೆ. ಆ ಸಂದರ್ಭದಲ್ಲಿ ಯಾರೂ ಮನೆಯಲ್ಲಿ ಇರಲಿಲ್ಲ. 

ಅವರು ಕೇಟರಿಂಗ್ ಉದ್ಯಮಿಯಾಗಿದ್ದು, ಒಟ್ಟು ಐದು ಸಿಲಿಂಡರ್ ಗಳು ಸ್ಫೋಟವಾಗಿವೆ. ಮನೆಯಲ್ಲಿ ಮತ್ತೂ ಎರಡು ಸಿಲಿಂಡರ್ ಗಳು ಇವೆ ಎನ್ನಲಾಗಿದ್ದು, ಮತ್ತಷ್ಟು ಆತಂಕಗೊಂಡ ಯಾರೂ ಬೆಂಕಿ ನಂದಿಸಲು ಹೋಗಿಲ್ಲ. ಮನೆಯಲ್ಲಿದ್ದ ಅಡುಗೆ ಸಾಮಗ್ರಿ, ಶಾಮಿಯಾನ ಎಲ್ಲಾ ಸುಟ್ಟುಹೋಗಿದೆ.

ಅಗ್ನಿಶಾಮಕ ವಾಹನ ಕುಮಟಾದಿಂದ ಬರಲು ಸಮಯಹಿಡಿದ ಕಾರಣ ಅನಾಹುತದ ಪ್ರಮಾಣ ಹೆಚ್ಚಾಯಿತು ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು