ಶುಕ್ರವಾರ, ಏಪ್ರಿಲ್ 3, 2020
19 °C

ಕದ್ದ 24 ಕತ್ತೆಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೇರದಾಳ: ರಬಕವಿಯಲ್ಲಿ 24 ಕತ್ತೆಗಳನ್ನು ಕಳುವು ಮಾಡಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ ಎಂದು ಬನಹಟ್ಟಿ ಸಿಪಿಐ ಅಶೋಕ ಸದಲಗಿ ಹೇಳಿದರು.

ಆನಂದ ಲಕ್ಷ್ಮಣ ಭಜಂತ್ರಿ, ಪರಶುರಾಮ ರಾಮು ಭಜಂತ್ರಿ, ಮುತ್ತಪ್ಪ ಸದಾಶಿವ ಹುದ್ದಾರ, ಪರಶುರಾಮ ಮಹಾದೇವ ಭಜಂತ್ರಿ, ಶ್ರೀಕಾಂತ ಮುರಿಗೆಪ್ಪ ಭಜಂತ್ರಿ, ಪ್ರಭು ಬಾಲಪ್ಪ ಭಜಂತ್ರಿ ಬಂಧಿತ ಆರೋಪಿಗಳು.

ಘಟನೆ ವಿವರ: ಆ. 19ರ ರಾತ್ರಿ ರಬಕವಿಯಲ್ಲಿ 24 ಕತ್ತೆಗಳು ಕಳುವಾಗಿದ್ದರ ಬಗ್ಗೆ ಶಾಮ ಮಾರುತಿ ಭಜಂತ್ರಿ ದೂರು ನೀಡಿದ್ದರು. ಇದರ ತನಿಖೆಯ ಜವಾಬ್ದಾರಿ ತೆಗೆದುಕೊಂಡ ತಂಡ ತನಿಖೆ ಆರಂಭಿಸಿ 24 ಕತ್ತೆಗಳ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಕತ್ತೆಗಳನ್ನು ಸಾಗಿಸಲು ಬಳಸಿದ ಅಶೋಕ ಲೈಲೆಂಡ್ ಕಂಪನಿಯ ಗೂಡ್ಸ್ ಹಾಗೂ 3 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಕತ್ತೆಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸಿಲಾಗಿದ್ದು, ಆರೋಪಿ ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು