ಬುಧವಾರ, ಮಾರ್ಚ್ 3, 2021
23 °C

ಈರುಳ್ಳಿ ಲಾರಿಯಲ್ಲಿ ‘ಸೋಂಕಿತರ’ ಕರೆತಂದ ಚಾಲಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಈರುಳ್ಳಿ ಸಾಗಣೆ ಲಾರಿಯ ಚಾಲಕರೊಬ್ಬರು ಹೈದರಾಬಾದ್‌ನಿಂದ ‘ಸೋಂಕಿತ’ರನ್ನು ‘ಕದ್ದು ಮುಚ್ಚಿ’ ಕರೆತಂದ ವಿಷಯ ಬೆಳಕಿಗೆ ಬಂದಿದೆ. ಕರ್ನಾಟಕ ಹಾಗೂ ತೆಲಂಗಾಣ ಗಡಿಗಳ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರನ್ನೇ ಈ ಚಾಲಕ ಕಣ್ತಪ್ಪಿಸಿದ್ದಾನೆ.

ಇಲ್ಲಿನ ಕರೀಂ ನಗರದ ನಿವಾಸಿ 35 ವರ್ಷ ವಯಸ್ಸಿನ ಲಾರಿ ಚಾಲಕಗೂ ಕೋವಿಡ್‌–19 ತಗುಲಿರುವುದು ಗುರುವಾರ ದೃಢಪ‍ಟ್ಟಿದೆ. ಆತನ ಪ್ರಯಾಣದ ದಾಖಲೆ ವಿವರಗಳನ್ನು ಗಮನಿಸಿದಾಗ ಈ ವಿಷಯವೂ ಬಹಿರಂಗಗೊಂಡಿದೆ.

‘ಕಿಡ್ನಿಸ್ಟೋನ್‌ ಸಮಸ್ಯೆಯಿಂದ ಬಳಲುತ್ತಿದ್ದ ಕೋಡ್ಲಿಯ ವ್ಯಕ್ತಿ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ ತೆರಳಿದ್ದರು. ಅವರು ಹಾಗೂ ಅವರ ಪತ್ನಿಯನ್ನು ಏ.30ರಂದು ಲಾರಿ ಚಾಲಕ, ಈರುಳ್ಳಿ ಮೂಟೆಗಳ ಮಧ್ಯೆ ಕೂಡ್ರಿಸಿ ಕರೆತಂದಿದ್ದ. ಸೋಂಕಿತನೇ ಇದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈತನಿಗೆ ಸೋಂಕು ಇರುವುದು ಮೇ 4ರಂದು ದೃಢಪಟ್ಟಿತ್ತು’ ಎಂದು ಮೂಲಗಳು ತಿಳಿಸಿವೆ.‌  

ಈ ಚಾಲಕ ಹಲವು ಬಾರಿ ಲಾರಿಯಲ್ಲಿ ಚೆಕ್‌ಪೋಸ್ಟ್‌ಗಳ ಸಿಬ್ಬಂದಿಯ ಕಣ್ತಪ್ತಿಸಿ ಹೈದರಾಬಾದ್‌ನಿಂದ ಜನರನ್ನು ಕರೆತಂದಿದ್ದ ಎಂದೂ ಮೂಲಗಳು ತಿಳಿಸಿವೆ. ಲಾರಿಯಲ್ಲಿ ಯಾರ್‍ಯಾರು ಸಂಚರಿಸಿದ್ದಾರೆ ಎಂಬುದರ ಬಗ್ಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು