ಶೈಕ್ಷಣಿಕ ಮೀಸಲಾತಿ: ಕೆನೆ ಪದರ ಆದಾಯ ಮಿತಿ ಏರಿಕೆ

7

ಶೈಕ್ಷಣಿಕ ಮೀಸಲಾತಿ: ಕೆನೆ ಪದರ ಆದಾಯ ಮಿತಿ ಏರಿಕೆ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಪ್ರವರ್ಗದ 2‘ಎ’, 2‘ಬಿ‘,3‘ಎ’ ಮತ್ತು 3‘ಬಿ’ದವರಿಗೆ ಕೆನೆ ಪದರ ವಾರ್ಷಿಕ ಮಿತಿಯನ್ನು ₹ 6 ಲಕ್ಷಗಳಿಂದ ₹ 8 ಲಕ್ಷಗಳಿಗೆ ಏರಿಸಿರುವುದರಿಂದ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ (ಸಿಇಟಿ) ಈ ವರ್ಗದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಹಿಂದುಳಿದ ವರ್ಗಗಳಿಗೆ ಅನುಕೂಲ ಮಾಡಲು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಇರುವ ಕೆನೆ ಪದರ ಆದಾಯ ಮಿತಿಯನ್ನು ಹೆಚ್ಚಿಸುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕೊನೆಯ(2018 ಫೆಬ್ರವರಿ) ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಇದನ್ನು ಹಾಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಕಾರಗೊಳಿಸಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಈ ವರ್ಷದ ಎಂಜಿನಿಯರಿಂಗ್ ಮತ್ತು ಇತರ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಅನ್ವಯವಾಗಲಿದೆ.

ಈ ಹಿಂದೆ ವಾರ್ಷಿಕ ಆದಾಯ ಮಿತಿ ₹2 ಲಕ್ಷ(2002) ಇತ್ತು. ಬಳಿಕ ಅದನ್ನು ₹3.50 ಲಕ್ಷಗಳಿಗೆ(2012) ಹೆಚ್ಚಿಸಲಾಯಿತು. 2013 ರಲ್ಲಿ ₹4.50 ಲಕ್ಷಗಳಿಗೂ, 2015 ರಲ್ಲಿ ₹ 6 ಲಕ್ಷಗಳಿಗೆ ಹೆಚ್ಚಿಸಲಾಗಿತ್ತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !