ಶನಿವಾರ, ಸೆಪ್ಟೆಂಬರ್ 19, 2020
21 °C

ಹಲಗೂರು ಬಳಿ ಬೀಡು ಬಿಟ್ಟ 3 ಕಾಡಾನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಗೂರು: ಸಮೀಪದ ಭೀಮಾ ಜಲಾಶಯ ಚಿಕ್ಕ ತೊರೆಯಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಭಾನುವಾರ ಬೆಳಿಗ್ಗೆ ಮಳವಳ್ಳಿ ಕಡೆಯಿಂದ ಬಂದ ಕಾಡಾನೆಗಳು ಭೀಮಾ ಜಲಾಶಯ ಚಿಕ್ಕ ತೊರೆ ಬಳಿ ಇರುವ ಮಾವು, ಬಾಳೆ, ಎಲೆ ತೋಟಗಳಲ್ಲಿ ನುಗ್ಗಿ ಫಸಲು ನಾಶ ಮಾಡಿವೆ. ಬಳಿಕ, ಚಿಕ್ಕ ತೊರೆಯಲ್ಲಿ ಬೀಡು ಬಿಟ್ಟಿವೆ.

ಶನಿವಾರ ಬೆಳಿಗ್ಗೆ ಮಳವಳ್ಳಿ ಸಮೀಪದ ದೋರನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡ ನಾಲ್ಕು ಕಾಡಾನೆಗಳ ಪೈಕಿ ಒಂದು ಆನೆ ಮಳವಳ್ಳಿ ಸಮೀಪವೇ ಉಳಿದುಕೊಂಡಿದೆ. ಮೂರು ಕಾಡಾನೆಗಳು ಮಳವಳ್ಳಿ ಮಾರ್ಗವಾಗಿ ಚಿಕ್ಕ ತೊರೆಗೆ ಬಂದಿವೆ.

‘ಆನೆಗಳನ್ನು ಕಾಡಿಗಟ್ಟಲು ಸಿಡಿಮದ್ದು ಸಿಡಿಸಲಾಯಿತು. ಆದರೂ ಆನೆಗಳು ಕಾಡಿಗೆ ಹೋಗುತ್ತಿಲ್ಲ. ಸಂಜೆ ಬಳಿಕ ಮತ್ತೆ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು