ಸೋಮವಾರ, ಜನವರಿ 20, 2020
20 °C

ಜನಗಣತಿಗೆ ಮಾಹಿತಿ ಕೊಡಿ, ಎನ್ ಪಿಆರ್‌‌ಗೆ ಅಸಹಕಾರ ತೋರಿ: ಸಸಿಕಾಂತ್ ಸೆಂಥಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿ ಇಂದು ಸಂವಿಧಾನ ವಿರೋಧಿ ಬೆಳವಣಿಗೆಗಳು ನಡೆಯುತ್ತಿದ್ದು, ಎನ್‌ಪಿ‌ಆರ್ ಮಾಹಿತಿ ಕೇಳಲು ಬಂದರೆ ಅದನ್ನು ಜನ ತಿರಸ್ಕರಿಸಬೇಕು, ಕೇವಲ ಜನಗಣತಿಗಷ್ಟೇ ಸಹಕಾರ ನೀಡಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿ ಕಾಂತ್ ಸೆಂಥಿಲ್ ಸಲಹೆ ನೀಡಿದರು.


ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿಚಾರ ಸಂಕಿರಣದಲ್ಲಿ ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಭಾಗವಹಿಸಿದ್ದರು.

ನಗರದಲ್ಲಿ ಬುಧವಾರ ದಲಿತ ಒಕ್ಕೂಟ ಹಮ್ಮಿಕೊಂಡ ಪೌರತ್ವ ಕಾಯ್ದೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ನಂತರ ಮುಸ್ಲಿಮರ ವಿರುದ್ಧ ನಡೆದಿರುವ ಈ ಷಡ್ಯಂತ್ರ ದಲಿತರ ವಿರುದ್ಧವೂ ಹೌದು, ಶಾಂತಿಯುತ ಅಸಹಕಾರ ತೋರಿಸುವ ಮೂಲಕ ಈ ಷಡ್ಯಂತ್ರಗಳನ್ನು ಹಿಮ್ಮೆಟ್ಟಿಸಬೇಕು ಎಂದರು.


ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಿಚಾರ ಸಂಕಿರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಆಂಜನೇಯ, ಜಮೀರ್ ಅಹಮದ್ ಖಾನ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದೇವನೂರು ಮಹಾದೇವ ಅವರು ಭಾಷಣ ಮಾಡಿದರು. ಸಮಾರಂಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ದೇವನೂರು ಮಹಾದೇವ ಅವರ ಭಾಷಣವನ್ನು ಆಲಿಸಿದರು.

ಇದನ್ನೂ ಓದಿ: 1 ಜೆಎನ್‌ಯು ಹತ್ತಿಕ್ಕಿದರೆ ನೂರು ಜೆಎನ್‌ಯು ಸಿಡಿದೇಳುತ್ತವೆ: ಸಸಿಕಾಂತ್ ಸೆಂಥಿಲ್

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು