ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐಗೆ ಜಮೆಯಾದ ₹6.12 ಲಕ್ಷ ಮೊತ್ತದ ನೋಟು ಖೋಟಾ

ಕೆನರಾ, ಆಕ್ಸಿಸ್ ಬ್ಯಾಂಕ್‌ ವಿರುದ್ಧ ಎಫ್‌ಐಆರ್‌
Last Updated 22 ಅಕ್ಟೋಬರ್ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ಕೆನರಾ ಹಾಗೂ ಆಕ್ಸಿಸ್ ಬ್ಯಾಂಕ್‌ನವರು ಆರ್‌ಬಿಐಗೆ ಜಮೆ ಮಾಡಿದ್ದ ಹಣದ ಪೈಕಿ ₹6.12 ಲಕ್ಷ ಮೌಲ್ಯದ ಖೋಟಾ ನೋಟು ಪತ್ತೆ ಆಗಿವೆ.

ಆರ್‌ಬಿಐ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಆಂತರಿಕ ಲೆಕ್ಕಪತ್ರ ಪರಿಶೋಧನೆ ವೇಳೆ ಈ ಅಂಶ ಬಹಿರಂಗವಾಗಿದೆ. ಅದೇ ಪರಿಶೋಧನಾ ವರದಿ ಆಧರಿಸಿ ಅಧಿಕಾರಿಗಳು, ಕೆನರಾ ಹಾಗೂ ಆಕ್ಸಿಸ್ ಬ್ಯಾಂಕ್‌ ವಿರುದ್ಧ ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದಾರೆ.

‘ಕೆನರಾ ಬ್ಯಾಂಕ್ ಹಾಗೂ 6 ಕರೆನ್ಸಿ ಚಸ್ಟ್‌ನವರು ಜನವರಿ 1ರಿಂದ ಮಾರ್ಚ್ 31ರ ಅವಧಿಯಲ್ಲಿ ಆರ್‌ಬಿಐಗೆ ಹಣ ಜಮೆ ಮಾಡಿದ್ದರು. ಅದೇ ಹಣದಲ್ಲೇ ₹5.93 ಲಕ್ಷ ಮೌಲ್ಯದ ಖೋಟಾ ನೋಟುಗಳು ಪತ್ತೆಯಾಗಿವೆ. ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆರ್‌ಬಿಐಸಹಾಯಕ ವ್ಯವಸ್ಥಾಪಕ ಬಿ.ಮಹೇಶ್‌ ದೂರಿನಲ್ಲಿ ತಿಳಿಸಿದ್ದಾರೆ.

‘₹100 ಮುಖಬೆಲೆಯ 39, ₹500 ಮುಖಬೆಲೆಯ 533,‌ ₹1,000 ಮುಖಬೆಲೆಯ 323 ಖೋಟಾ ನೋಟುಗಳು ದೊರಕಿವೆ. ಅವುಗಳು ಬ್ಯಾಂಕ್‌ಗಳಿಗೆ ಹೇಗೆ ಬಂದವು ಎಂಬುದು ಗೊತ್ತಾಗಿಲ್ಲ. ಪ್ರತಿ ನೋಟುಗಳನ್ನು ಪರಿಶೀಲಿಸಿ ಪಡೆದುಕೊಳ್ಳುವುದು ಬ್ಯಾಂಕ್‌ನವರ ಜವಾಬ್ದಾರಿ. ಆದರೆ, ಈ ವಿಷಯದಲ್ಲಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರ್‌ಬಿಐ ವ್ಯವಸ್ಥಾಪಕ ಎಂ.ಎಲ್‌.ಲಕ್ಷ್ಮಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT