ಮೈಸೂರು: ಭಾರತೀಯ ವಾಯುಪಡೆಯ ಯುದ್ಧ ವಿಮಾನದ (ಫೈಟಿಂಗ್ ಸ್ಟ್ರೀಮ್) ಪೈಲಟ್ ತರಬೇತಿಗೆ ಕೊಡಗಿನ ಪುಣ್ಯಾ ನಂಜಪ್ಪ ಆಯ್ಕೆಯಾಗಿದ್ದಾರೆ.

ಹೈದರಾಬಾದ್‌ನ ದುಂಡಿಗಲ್‌ನಲ್ಲಿರುವ ವಾಯುಪಡೆ ಅಕಾಡೆಮಿಯ ಫ್ಲೈಯಿಂಗ್ ಬ್ರಾಂಚ್‌ನಲ್ಲಿ ಈಗಾಗಲೇ ಒಂದು ವರ್ಷದ ತರಬೇತಿ ಪೂರ್ಣಗೊಳಿಸಿರುವ ಅವರು, ಯುದ್ಧ ವಿಮಾನದ ‘ಟ್ರೈನಿ ಪೈಲಟ್’ ಆಗಿ ಆರು ತಿಂಗಳು ತರಬೇತಿ ಪಡೆಯಲಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೊಳುವಂಡ ಪಿ.ನಂಜಪ್ಪ ಹಾಗೂ ಅನುರಾಧಾ ನಂಜಪ್ಪ ದಂಪತಿ ಪುತ್ರಿಯಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ.

‘ಅಕಾಡೆಮಿಯಲ್ಲಿ ಒಂದು ವರ್ಷದ ತರಬೇತಿ ಬಳಿಕ ಸಾಗಣೆ, ಕಾರ್ಗೊ, ಫೈಟಿಂಗ್ ಸ್ಟ್ರೀಮ್‌ನಲ್ಲಿ ಪೈಲಟ್ ಆಗಲು ಆಯ್ಕೆ ಮಾಡಲಾಗುತ್ತದೆ. ಅದರಲ್ಲಿ ನನ್ನ ಪುತ್ರಿ ಫೈಟಿಂಗ್ ಸ್ಟ್ರೀಮ್‌ಗೆ ಅರ್ಹತೆ ಪಡೆದುಕೊಂಡಿದ್ದಾಳೆ. ಇದು ನಮ್ಮ ಪಾಲಿಗೆ ಹೆಮ್ಮೆಯ ವಿಚಾರ’ ಎಂದು ಅನುರಾಧಾ ನಂಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.