ಮಂಗಳವಾರ, ಮಾರ್ಚ್ 31, 2020
19 °C

‘ಕವಲುದಾರಿ’ ಅತ್ಯುತ್ತಮ ಕನ್ನಡ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಅಶ್ವಿನಿ ಪುನಿತ್‌ ರಾಜ್‌ಕುಮಾರ್ ನಿರ್ಮಾಣದ ‘ಕವಲುದಾರಿ’ (ನಿರ್ದೇಶಕ:ಹೇಮಂತ್ ಮುರುಳಿರಾವ್) ಸಿನಿಮಾ ಭಾಜನವಾಗಿದೆ.

‘ಒಂದು ಶಿಕಾರಿಯ ಕಥೆ’(ನಿ:ಸಚಿನ್ ಶೆಟ್ಟಿ), ‘ರಂಗನಾಯಕಿ’(ನಿ:ದಯಾಳ್ ಪದ್ಮನಾಭನ್) ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿವೆ. ತೀರ್ಪುಗಾರರ  ಮೆಚ್ಚುಗೆಯ ಪ್ರಶಸ್ತಿಗೆ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ (ನಿ: ಆರ್.ಮಧುಚಂದ್ರ) ಸಿನಿಮಾ ಆಯ್ಕೆಯಾಗಿದೆ.

ವರ್ಷದ ಅತ್ಯುತ್ತಮ ಜನಪ್ರಿಯ ಕನ್ನಡ ಚಲನಚಿತ್ರ ಪ್ರಶಸ್ತಿಗೆ ‘ಮುನಿರತ್ನ ಕುರುಕ್ಷೇತ್ರ’(ನಿ:ನಾಗಣ್ಣ) ಆಯ್ಕೆಯಾದರೆ, ‘ಬೆಲ್ ಬಾಟಂ’ (ನಿ:ಬಿ.ವಿ.ಜಯತೀರ್ಥ) ಮತ್ತು ‘ಯಜಮಾನ’(ನಿ:ವಿ.ಹರಿಕಷ್ಣ, ಪೊನ್ ಕುಮಾರನ್‌) ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿ ಪಡೆದವು.

ಚಿತ್ರಭಾರತಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಪಂಗ್ರುನ್’(ನಿ:ಮಹೇಶ್‌ ವಾಮನ್ ಮಂಜ್ರೇಕರ್‌) ಭಾಜನವಾಗಿದೆ. ತೀರ್ಪುಗಾರರ ವಿಶೇಷ ಭಾರತೀಯ ಸಿನಿಮಾ ಪ್ರಶಸ್ತಿಗೆ ‘ಬಿರ್ಯಾನಿ(ನಿ:ಸಜಿನ್ ಬಾಬು) ಮತ್ತು ‘ಜ್ವಾಲ್ವಿ(ದಿ ಸೀಡ್)(ನಿ:ರಜನಿ ಬಸುಮತ್ರೆ)’ ಚಿತ್ರಗಳು ಆಯ್ಕೆಯಾಗಿವೆ.

ಚಲನಚಿತ್ರವು ಸಿನಿಮಾ ವಿಮರ್ಶಕರ ಅಂತರರಾಷ್ಟ್ರೀಯ ಒಕ್ಕೂಟ (ಎಫ್‌ಐಪಿಆರ್‌ಎಎಸ್‌ಸಿಐ) ನೀಡುವ ಅತ್ಯುತ್ತಮ ವಿಮರ್ಶಕ ಚಿತ್ರಕ್ಕೆ ‘ದಿ ಡಾಗ್ ಅ್ಯಂಡ್ ಹಿಸ್ ಮ್ಯಾನ್’(ನಿ: ಸಿದ್ಧಾರ್ಥ ತ್ರಿಪಾಠಿ) ಆಯ್ಕೆಯಾಗಿದೆ.

‘ಹ್ಯಾಪಿ ಓಲ್ಡ್‌ ಇಯರ್ಸ್’ ಅತ್ಯುತ್ತಮ ಚಿತ್ರ
ಥಾಯ್ಲೆಂಡ್‌ನ ನವಾಪೋಲ್ ತಮ್ರೊಂಗ್ರಟ್ಟನರಿಟ್ ನಿರ್ಮಿಸಿ ನಿರ್ದೇಶಿಸಿದ ‘ಹ್ಯಾಪಿ ಓಲ್ಡ್ ಇಯರ್ಸ್’ ಸಿನಿಮಾ ಏಷ್ಯನ್  ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಕೋವಿಡ್‌ 19’ ಭೀತಿ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕಾರಕ್ಕೆ ಈ ಚಿತ್ರ ತಂಡ ಬರಲಿಲ್ಲ.

ಅಂತರರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ‘ಪಿಂಗಾರ’(ನಿ: ಪ್ರೀತಂ ಆರ್. ಶೆಟ್ಟಿ) ಆಯ್ಕೆಯಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)