ನೆರೆ ಪರಿಹಾರ: ಕೇಂದ್ರ ನಿರ್ಲಕ್ಷ್ಯ ಮಾಡಿಲ್ಲ

ಬೆಂಗಳೂರು: ‘ಪರಿಹಾರ ಕಾರ್ಯಕ್ಕೆ ಕೇಂದ್ರ ಸಹಕಾರ ನೀಡಿದೆ. ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಒತ್ತಡ ಹಾಕಲಾಗುವುದು. ಹೀಗಾಗಿ ರಾಷ್ಟ್ರೀಯ ದುರಂತ ಎಂದು ಘೋಷಿಸಬೇಕೆಂಬ ಒತ್ತಡ ಹೇರುವ ಅಗತ್ಯ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
‘ನೆರೆ ಸ್ಥಿತಿ ಮನವರಿಕೆಯಾಗಿದ್ದರಿಂದಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ₹ 856 ಕೋಟಿ ನರೇಗಾ ಮೊತ್ತವನ್ನು ಕೇಂದ್ರ ಬಿಡುಗಡೆ ಮಾಡಿರುವುದು ಸಹ ರಾಜ್ಯದ ಮೇಲಿನ ಅದರ ಕಾಳಜಿಗೆ ಸಾಕ್ಷಿ’ ಎಂದು ಅವರು ಶನಿವಾರ ಇಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಒಟ್ಟು 924 ಪರಿಹಾರ ಕೇಂದ್ರಗಳಲ್ಲಿ 2,18,494 ಮಂದಿ ಆಶ್ರಯ ಪಡೆದಿದ್ದಾರೆ ಎಂದರು.
‘ಸಂಪುಟ ವಿಸ್ತರಣೆ ಶೀಘ್ರ ನಡೆಯಲಿದೆ’ ಎಂದ ಅವರು, ‘ಸಂಪುಟ ವಿಸ್ತರಣೆಗೂ, ಪ್ರವಾಹ ಪರಿಹಾರ ಕಾರ್ಯಾಚರಣೆಗೂ ಸಂಬಂಧವಿಲ್ಲ. ಎಲ್ಲ ಶಾಸಕರು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಎಂದು ತಿಳಿಸಿದರು.
ಸಿ.ಎಂ ಹೇಳಿದ್ದು...
* ಕೇಂದ್ರದಿಂದ ರಾಜ್ಯವು ನೆರವು ಕೇಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಯೇ ಇಲ್ಲ
* ನೆರೆ ಹಾನಿ ಪ್ರದೇಶಗಳಿಗೆ ಭೇಟಿಯಲ್ಲಿ ಭೇದ ಮಾಡಿಲ್ಲ. ಎಲ್ಲಿ ದೊಡ್ಡ ಹಾನಿ ಆಗಿದೆಯೋ ಅಲ್ಲಿಗೆ ಮೊದಲಾಗಿ ತೆರಳಿದ್ದೇನೆ.
* ಕೊಯ್ನಾ ಅಣೆಕಟ್ಟೆಯಿಂದ ನೀರು ಬಿಡುಗಡೆ: ಮಹಾರಾಷ್ಟ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.
* ಎನ್ಡಿಆರ್ಎಫ್ನ 20 ತಂಡ, ಸೇನೆಯ 11, ನೌಕಾಪಡೆಯ 5, ವಾಯುಪಡೆಯ 4 ಹೆಲಿಕಾಪ್ಟರ್ಗಳು, ಎಸ್ಡಿಆರ್ಎಫ್ನ 2 ತಂಡಗಳು ಸಕ್ರಿಯವಾಗಿವೆ.
ಇನ್ನಷ್ಟು...
* ರಸ್ತೆ ಬಂದ್; ದುಬಾರಿಯಾಯಿತು ವಿಮಾನ ಪ್ರಯಾಣ
* ಸಂಪರ್ಕ ಕಡಿತ: ಗೂಗಲ್ ಅಪ್ಡೇಟ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.