ಮಂಗಳವಾರ, ಜನವರಿ 21, 2020
29 °C

ಗಬ್ಬೂರು ಠಾಣೆ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿ ಪೊಲೀಸ್ ಠಾಣೆಯು 2019ನೇ‌ ಸಾಲಿನಲ್ಲಿ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಗೃಹ ಸಚಿವಾಲಯವು ದೇಶದ ಪೊಲೀಸ್‌ ಠಾಣೆಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಈಚೆಗೆ ಬಿಡುಗಡೆ ಮಾಡಿದೆ. ಬ್ಯೂರೊ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ (ಪಿಪಿಆರ್‌ಡಿ) ನೀಡಿದ್ದ ಮಾನದಂಡ ಗಳನ್ನು ಆಧರಿಸಿ ಗ್ರ್ಯಾಂಡ್ ತೊರಟನ್ ಇಂಡಿಯಾ ಎಂಬ ಖಾಸಗಿ ಸಂಸ್ಥೆ ಕಳೆದ ಅಕ್ಟೋಬರ್‌ನಲ್ಲಿ ದೇಶದಾದ್ಯಂತ ಸಮೀಕ್ಷೆ ನಡೆಸಿತ್ತು. 

ಠಾಣೆಗಳಲ್ಲಿ ಕಾರ್ಯದಕ್ಷತೆ, ಕ್ಷಮತೆ, ಸ್ವಚ್ಛತೆ, ಕಟ್ಟಡ ಸೌಲಭ್ಯ, ಸಾರ್ವಜನಿಕರೊಂದಿಗೆ ಸ್ಪಂದನೆ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರಶಸ್ತಿ ಪ್ರಕಟಿಸಲಾಗಿದೆ. ಗಬ್ಬೂರು ಠಾಣೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ 17ನೇ ಸ್ಥಾನದಲ್ಲಿದೆ.

‘ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್ ಠಾಣೆಯನ್ನು ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆಯೆಂದು ಗುರುತಿಸಿರುವುದು ಹೆಗ್ಗಳಿಕೆಯ ವಿಷಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

‘ಕಾನೂನು ಸುವ್ಯವಸ್ಥೆ ಕಾಪಾಡಲು ಜನ ಸಹಕಾರದೊಂದಿಗೆ ಉತ್ತಮ ವಾಗಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಗುರುತಿಸಿದ್ದು ಖುಷಿ ತಂದಿದೆ’ ಎಂದು ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ರಂಗಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು