ಭಾನುವಾರ, ಸೆಪ್ಟೆಂಬರ್ 15, 2019
27 °C
ಜಮೀನು ವಿವಾದ ಪ್ರಕರಣ ಇತ್ಯರ್ಥಕ್ಕೆ ಲಂಚ ಕೇಳಿದ ಪಿಎಸ್‌ಐ

ದಾವಣಗೆರೆ: ₹ 10 ಸಾವಿರ ಲಂಚಕ್ಕೆ ಬೇಡಿಕೆ, ಎಸಿಬಿ ಬಲೆಗೆ ಹಲುವಾಗಲು ಠಾಣೆ ಪಿಎಸ್‌ಐ

Published:
Updated:

ಹರಪನಹಳ್ಳಿ: ಜಮೀನು ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ₹ 10 ಸಾವಿರ ಲಂಚ ಪಡೆದ ತಾಲ್ಲೂಕಿನ ಹಲುವಾಗಲು ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರಕಾಶ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ರಾಜಪ್ಪ ಮಡಿವಾಳರ ಅವರು ಬಳ್ಳಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ನಿಟ್ಟೂರು ಗ್ರಾಮದ ಪರಶುರಾಮ ಕೆ. ಜಾದವ್‌ ಅವರಿಂದ ಪಿಎಸ್‌ಐ ಪ್ರಕಾಶ್‌ ₹ 10 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ಪರಶುರಾಮ ಅವರು ಬಳ್ಳಾರಿಯ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಶುಕ್ರವಾರ ಬೆಳಿಗ್ಗೆ 9ಕ್ಕೆ ಹಲುವಾಗಲು ಗ್ರಾಮದ ಅನ್ನಪೂರ್ಣೇಶ್ವರಿ ಹೋಟೆಲ್‌ ಬಳಿ ರಾಜಪ್ಪ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಚಾರಣೆ ನಡೆಸಿದಾಗ ರಾಜಪ್ಪ ಅವರು ಪಿಎಸ್‌ಐ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಪ್ರಕಾಶ್‌ ಹಾಗೂ ರಾಜಪ್ಪ ಇಬ್ಬರನ್ನೂ ಎಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Post Comments (+)