ತುಮಕೂರು: ನಾನು ಸೋತಿದ್ದೇನೆ. ಅದರಿಂದ ಕುಪಿತನಾಗಿಲ್ಲ. ಸೋತಿದ್ದರೂ ನನ್ನಲ್ಲಿನ ನೈತಿಕ ಬಲ ಕುಗ್ಗಿಲ್ಲ. ಹೋರಾಟ ಮುಂದುವರಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ತುಮಕೂರಿಗೆ ಆಗಮಿಸಿದ್ದ ದೇವೇಗೌಡ ಅವರು, ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, ನಾನುಸೋಲಿನಿಂದ ಕುಪಿತನಾಗಲ್ಲ. ನನಗೆ ಮತ ನೀಡಿದ ಜನತೆಗೆ ಅನಂತ ಧನ್ಯವಾದಗಳು. ನಿಮ್ಮನ್ನುಭೇಟಿಯಾಗಲು 2 ತಿಂಗಳ ನಂತರ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ.ಸೋತಿದ್ದರೂ ನನ್ನಲ್ಲಿನ ನೈತಿಕ ಬಲ ಕುಗ್ಗಿಲ್ಲ. ಹೋರಾಟ ಮುಂದುವರಿಸುತ್ತೇನೆ ಎಂದರು.
ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧವೂ ದೇವೇಗೌಡರು ಗುಡುಗಿದರು. ‘ವೇಳಾಪಟ್ಟಿ ಹಾಕಿಕೊಂಡು ಪ್ರತಿ ತಾಲ್ಲೂಕಿಗೆ ಹೋಗಿ ಜನರ ಕಷ್ಟ ಆಲಿಸಿ ಯಡಿಯೂರಪ್ಪರ ಗಮನಕ್ಕೆ ತರುತ್ತೇನೆ.ಕೇಂದ್ರದ ತಪ್ಪು ಕಾರ್ಯಕ್ರಮಗಳಿಂದಾಗಿ ದೇಶದ ಆರ್ಥಿಕತೆ ಹದಗೆಟ್ಟಿದೆ. ರಾಜ್ಯದ ಕಷ್ಟಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ. ಪರಿಹಾರ ತರಲು ರಾಜ್ಯ ಸರ್ಕಾರ ವಿಫಲವಾಗಿದೆ. ಅ.10 ರಿಂದ ಆರಂಭವಾಗುವ ಅಧಿವೇಶನದ ಮೊದಲ ದಿನ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರದ ಮೇಲೆ ಒತ್ತಡ ಹಾಕೋಣ,’ ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.

ಗುಬ್ಬಿ ಶಾಸಕಎಸ್.ಆರ್. ಶ್ರೀನಿವಾಸ್ ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.ರಾಜ್ಯಕ್ಕೆ ಸಿಗಬೇಕಾಗ ಬರ ಪರಿಹಾರ ಕೇಳುವ ಗಂಡಸರು ಬಿಜೆಪಿಯಲ್ಲಿ ಇಲ್ಲ. ಷಂಡರನ್ನು ಆಯ್ಕೆ ಮಾಡಿದಕ್ಕೆ ಈ ಪರಿಸ್ಥಿತಿ ಬಂದಿದೆ. ಶಾ, ಮೋದಿ ಮುಂದೆ ನಿಂತು ಮಾತನಾಡುವ ತಾಕತ್ತು ಯಡಿಯೂರಪ್ಪಗೆ ಇಲ್ಲ. ಇಂಥ ವ್ಯವಸ್ಥೆ ರಾಜ್ಯಕ್ಕೆ ಬೇಕಿತ್ತೇ.ಮಾಜಿ ಪ್ರಧಾನಿಯನ್ನು ಸೋಲಿಸಿದ ಕೀರ್ತಿ, ಬಿರುದು ನಮಗೆ ಸಿಕ್ಕಿದೆ,’ ಎಂದು ಕಿಡಿಕಾರಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ‘ದೇವೇಗೌಡರು ಲೋಕಸಭೆಯಲ್ಲಿ ಇದಿದ್ದರೆ, ಮೋದಿಗೆ ಕರ್ನಾಟಕ ನೆನಪಾಗುತ್ತಿತ್ತು.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಇದ್ದರೆ ದಿನವೂ ಯುಗಾದಿ, ದೀಪಾವಳಿಯ ವಾತಾವರಣ ಇರುತ್ತದೆ, ಪ್ರಗತಿ ವೇಗ ಹೆಚ್ಚುತ್ತದೆ, ಎಂಬ ಭಾಷಣ ಬಿಗಿದವರು ರಾಜ್ಯಕ್ಕೆ ಎರಡು ರೂಪಾಯಿ ಬಿಡುಗಡೆ ಮಾಡಿಲ್ಲ. ಹಸಿವಿದ್ದಾಗಲೇ ಊಟವಿಕ್ಕಬೇಕು. ಆದರೆ, ನಿರಾಶ್ರಿತರಿಗೆ ಅನ್ನ, ಆಶ್ರಯ ಕೊಡುವ ಬದಲು ಸಬೂಬು ನೀಡುತ್ತಿದ್ದಾರೆ. ದೇವೇಗೌಡರು, ಖರ್ಗೆ ಅವರನ್ನು ಸೋಲಿಸಿ ಕರ್ನಾಟಕ ನಿಜಕ್ಕೂ ಅನಾಥವಾಗಿದೆ. ರಾಜ್ಯದ ಸಂಕಷ್ಟದ ಧ್ವನಿಯನ್ನು ಲೋಕಸಭೆಯಲ್ಲಿ ಹೇಳುವ ನಾಯಕರು ಇಲ್ಲ. ಸೂರ್ಯ, ಸಿಂಹರಂತವರು ಅಪ್ರಬುದ್ಧ, ಉದ್ಧಟನದ ಮಾತು ಹೇಳಿಕೊಂಡು ತಿರುಗುತ್ತಿದ್ದಾರೆ,’ ಎಂದು ಕಿಡಿ ಕಾರಿದರು.

ತುಮಕೂರಿನಲ್ಲಿ ಸಮಾವೇಶ ಆರಂಭವಾಗುತ್ತಲೇ ಮಳೆಯೂ ಶುರುವಾಯಿತು.ಕಾರ್ಯಕರ್ತರು ಕುರ್ಚಿಗಳನ್ನು ತಲೆ ಮೇಲಿಟ್ಟುಕೊಂಡು ಭಾಷಣ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.