ಮಡಿಕೇರಿ: ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ, ಪ್ರವಾಸಿಗರ ವಾಸ್ತವ್ಯಕ್ಕೆ ಅವಕಾಶ ನೀಡಿದ್ದ ಮರಗೋಡು ಗ್ರಾಂಮ ಪಂಚಾಯಿತಿ ವ್ಯಾಪ್ತಿಯ ಹುಲಿತಾಳದ ಪಕ್ಕದ ಹೋಂ ಸ್ಟೇಗೆ ಬೀಗ ಹಾಕಿ ಮಾಲೀಕರು ಹಾಗೂ ಪ್ರವಾಸಿಗರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.

ಭಾರತಿ ಎಂಬುವರು ಮನೆಯಲ್ಲಿ ಮೂರು ದಿನದಿಂದ ಅನಧಿಕೃತವಾಗಿ ಅತಿಥಿಗಳಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದರು. ಪ್ರವಾಸಿಗರು, ಡ್ರೋನ್ ಕ್ಯಾಮೆರಾ ಬಳಸಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಗ್ರಾಮಸ್ಥರು ದೂರಿನ ಮೇರೆಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಗ್ರಾಮೀಣ ಪೊಲೀಸರು ಶನಿವಾರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಮನೆಯಲ್ಲಿ ಮೈಸೂರಿನ ಮೂವರು ಯುವಕರಿದ್ದು ಮನೆಯ ಹೋಂ ಸ್ಟೇ ಮಾಲೀಕರು ತಮ್ಮ ಕುಟುಂಬಸ್ಥರು ಎಂದು ಸುಳ್ಳು ಹೇಳಿದ್ದರು. ಅವರ ಗುರುತಿನ ಚೀಟಿ ಪರಿಶೀಲಿಸಿದಾಗ ಮೈಸೂರಿನ ಪ್ರವಾಸಿಗರು ಎಂದು ಗೊತ್ತಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.