ಮಂಗಳವಾರ, ಜನವರಿ 21, 2020
25 °C
ಉಪಚುನಾವಣೆ ಫಲಿತಾಂಶ

ಹೊಸಕೋಟೆ: ಶತಕೋಟಿ ಒಡೆಯ ಎಂಟಿಬಿಗೆ ಸೋಲು; ಶರತ್ ಬಚ್ಚೇಗೌಡಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು 7,597 ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಶರತ್‌ ಬಚ್ಚೇಗೌಡ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ಹೊಸಕೋಟೆ ಅಖಾಡದಲ್ಲೊಂದು ಸುತ್ತು| ಕಾಂಗ್ರೆಸ್–ಬಿಜೆಪಿಗೆ ‘ಕುಕ್ಕರ್‌’ ತಾಪ

ಮೈತ್ರಿ ಸರ್ಕಾರದ ವೇಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಬಂದಿದ್ದ ಎಂಟಿಬಿ ನಾಗರಾಜು ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಪಕ್ಷದ ನಿರ್ಧಾರವನ್ನು ವಿರೋಧಿಸಿದ್ದ ಶರತ್‌ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹೀಗಾಗಿ ಈ ಚುನಾವಣೆ ಇಬ್ಬರಿಗೂ ರಾಜಕೀಯ ಅಳಿವು–ಉಳಿವಿನ ಪ್ರಶ್ನೆಯಾಗಿತ್ತು.

ಇವರಿಬ್ಬರ ಹೋರಾಟದ ಲಾಭ ಪಡೆಯಲು ಕಾಂಗ್ರೆಸ್‌ ತಂತ್ರ ಹೂಡಿತ್ತು. ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್‌ ಅವರ ಪತ್ನಿ ಪದ್ಮಾವತಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು