ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌ ಮೇಲೆ ಐಟಿ ದಾಳಿ ‌

ಮಂಗಳವಾರ, ಏಪ್ರಿಲ್ 23, 2019
31 °C

ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌ ಮೇಲೆ ಐಟಿ ದಾಳಿ ‌

Published:
Updated:

ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಎಚ್‌. ಲಾಡ್‌ ಅವರು ತಂಗಿರುವ ಬಳ್ಳಾರಿಯ ಖಾಸಗಿ ಹೊಟೇಲ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.  

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದ್ದು, ಸದ್ಯ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲಾಡ್‌ ಕೊಠಡಿಯಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ.

ಅನಿಲ್‌ ಲಾಡ್‌ ಅವರು ಬಳ್ಳಾರಿ ನಗರದ ಹೊಟೇಲ್‌ವೊಂದರಲ್ಲಿ ತಂಗಿದ್ದರು. ಈ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಮತ್ತು ಹಾಸನದ ಜೆಡಿಎಸ್‌ ಮುಖಂಡರ ಮನೆಗಳ ಮೇಲೆ ದಾಳಿ ನಡೆದ ಬೆಳವಣಿಗೆ ದೇಶಾದ್ಯಂತ ತೀವ್ರ ಚರ್ಚೆ ಮತ್ತು ಪ್ರತಿರೋಧಕ್ಕೆ ಕಾರಣವಾದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಲಾಡ್‌ ಮೇಲೆ ಮಂಗಳವಾರ ಈ ದಾಳಿ ನಡೆದಿದೆ.

ಅತ್ತ ಆಂಧ್ರ ಪ್ರದೇಶದಲ್ಲಿಯೂ ಗುಂಟೂರು ಲೋಕಸಭೆ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಗಲ್ಲಾ ಜಯದೇವ ಅವರ ಮನೆ ಮೇಲೆ ಮಂಗಳವಾರ ರಾತ್ರಿ ಅದಾಯ ತೆರಿಗೆ ಇಲಾಖೆಯ ದಾಳಿ ನಡೆದಿದೆ. 

ಇನ್ನಷ್ಟು: 

ಐ.ಟಿ ದಾಳಿ: ರಾಜಕೀಯ ಸಂಘರ್ಷ

ಕೇಂದ್ರದ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಟಿಡಿಪಿಯ ಗಲ್ಲಾ ಜಯದೇವ್‌ಗೆ ಐಟಿ ಬಿಸಿ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !