ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ವೀಕ್ಷಣೆಗೆ 22ರಂದು ಅವಕಾಶ

Last Updated 17 ಡಿಸೆಂಬರ್ 2019, 12:25 IST
ಅಕ್ಷರ ಗಾತ್ರ

ಕಾರವಾರ: ಯುದ್ಧವಿಮಾನ ವಾಹಕ ನೌಕೆ ‘ಐಎನ್ಎಸ್ ವಿಕ್ರಮಾದಿತ್ಯ’ವನ್ನು ಇಲ್ಲಿನ ಸೀಬರ್ಡ್ ನೌಕಾನೆಲೆಯಲ್ಲಿ ವೀಕ್ಷಿಸಲು ಡಿ.22ರಂದು (ಭಾನುವಾರ) ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಅಂದು ಬೆಳಿಗ್ಗೆ 10ರಿಂದ ಸಂಜೆ 4.30ರವರೆಗೆ ಭೇಟಿ ನೀಡಬಹುದು.

‘ಭಾರತೀಯ ನೌಕಾಪಡೆ ಸಪ್ತಾಹ 2019’ರ ಅಂಗವಾಗಿ ನೌಕಾಪಡೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ಭದ್ರತಾ ಸೂಚನೆಗಳು:ನೌಕಾನೆಲೆಯ ಅರಗಾ ದ್ವಾರದಿಂದ ಮಾತ್ರ ಪ್ರವೇಶಾವಕಾಶವಿದೆ. ದೃಶ್ಯ ಹಾಗೂ ಧ್ವನಿ ಮುದ್ರಣ ಮಾಡುವ ಮೊಬೈಲ್, ಕ್ಯಾಮೆರಾ ಮುಂತಾದ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ಒಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಭೇಟಿ ನೀಡುವವರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರ ಜಾರಿ ಮಾಡಿದ ಇನ್ಯಾವುದೇ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು.

ಸಾರ್ವಜನಿಕರ ವಾಹನಗಳನ್ನು ಪ್ರವೇಶದ್ವಾರದಲ್ಲೇ ನಿಲುಗಡೆ ಮಾಡಬೇಕು. ಅಲ್ಲಿಂದ ಜೆಟ್ಟಿಯವರೆಗೆ ನೌಕಾಪಡೆಯ ಬಸ್‌ಗಳಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಪಾಸ್‌ಗಳನ್ನು ನೀಡಲಿದ್ದು, ಅವುಗಳನ್ನು ಪುನಃ ಬರುವಾಗ ಭದ್ರತಾ ಸಿಬ್ಬಂದಿಗೆ ನೀಡಬೇಕು ಎಂದು ನೌಕಾನೆಲೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT