ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಭವಿಷ್ಯ ಹೇಳ್ತಾರಾ.. ಅವರು ಪುರೋಹಿತರಾ-ಸಿದ್ದರಾಮಯ್ಯ ವ್ಯಂಗ್ಯ

Last Updated 30 ಅಕ್ಟೋಬರ್ 2019, 12:14 IST
ಅಕ್ಷರ ಗಾತ್ರ

ಬಾಗಲಕೋಟೆ: 'ಪಾಪ ಯಡಿಯೂರಪ್ಪ ಭವಿಷ್ಯ ಹೇಳ್ತಾರಾ.. ಅವರು ಪುರೋಹಿತರಾ.. ಭವಿಷ್ಯ ಹೇಳೋದು ಕಲಿತಿದ್ದಾರಾ.. ಪಂಚಾಂಗ ಓದುತ್ತಾರಾ' ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಕಾಯಂ ವಿರೋಧ ಪಕ್ಷದ ನಾಯಕರಾಗಿಯೇ ಇರ್ತಾರೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಬುಧವಾರ ಜಮಖಂಡಿಯಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರ ಪರಿಹಾರ ಕೊಡದೇ ಹೇಳ್ತಾಯಿರೋದು ಸುಳ್ಳಲ್ವಾ.ನಾನು ಸತ್ಯ ಹೇಳಿದ್ದೇನೆ ಬಿಎಸ್ ವೈಸುಳ್ಳು ಹೇಳುತ್ತಿದ್ದಾರೆಎಂದು ಹರಿಹಾಯ್ದರು.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ವಿಚಾರದಲ್ಲಿ ಶ್ವೇತ ಪತ್ರ ಹೊರಡಿಸೋದು ಬೇಡಾ, ಯಡಿಯೂರಪ್ಪ ಜನರ ಬಳಿ ಬಂದು ಕಷ್ಟ ಕೇಳಲಿ ಎಂದು ಒತ್ತಾಯಿಸಿದರು.ಯಾರು ಸಂತ್ರಸ್ತರಿಗೆ ಪರಿಹಾರ ಸಿಕ್ಕಿದೆಯೋ ಇಲ್ವೋ ಅಂತ ಮಾತನಾಡಿಸಲಿ.ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಕರೆದು ಪರಿಹಾರ ಸರಿಯಾಗಿ ಕೊಟ್ಟಿದ್ದಾರಾ ಅಂತ ಸಿದ್ದರಾಮಯ್ಯ ಕೇಳಿದರು.

ಪರಿಹಾರ ಕೊಟ್ಟಿದ್ದು ಶಾಸಕರಿಗೆ ಗೊತ್ತೋ, ಬಿಎಸ್ವೈಗೆ ಗೊತ್ತಾ...?

ಬೆಳೆ, ಮನೆ ಪರಿಹಾರ ಕೊಟ್ಟಿದ್ದಾರಾ..? ಅಂಗಡಿ ಮುಂಗಟ್ಟುಗಳು ಕೊಚ್ಙಿಹೋಗಿವೆ..ಅದಕ್ಕೆ ಪರಿಹಾರ ಕೊಟ್ಟಿದ್ದಾರಾ.ಒಂದೇ ಮನೆಯಲ್ಲಿರುವ ಅಣ್ಣತಮ್ಮಂದಿರಿಗೆ ಪರಿಹಾರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ವಸ್ತು ಸ್ಥಿತಿ ಯಡಿಯೂರಪ್ಪಗೆ ಅರ್ಥವಾಗಿಲ್ಲ. ಅವರು ಸಂತ್ರಸ್ತರ ಬಳಿ ಬಂದಿಲ್ಲ.ಈ ಬಗ್ಗೆ ಅಸೆಂಬ್ಲಿಯಲ್ಲಿ ಎಲ್ಲವೂ ಹೇಳಿದ್ದೇವೆ.ಬಿಎಸ್ ವೈಪರಿಹಾರ ಕೊಡ್ತೀವಿ ಅಂತ ಒಪ್ಪಿಕೊಂಡಿದ್ದಾರೆ ‌.ಒಪ್ಪಿಕೊಳ್ಳದಿದ್ರೆ ಹೋರಾಟ ಮಾಡ್ತೀವಿ ಎಂದು ಎಚ್ಚರಿಸಿದರು.

ಟಿಪ್ಪು ಪಠ್ಯ ವಿಚಾರ

ಟಿಪ್ಪು ಪಠ್ಯ ಕೈಬಿಟ್ಟರೆ ಇತಿಹಾಸವನ್ನು ತಿರುಚಿದಂತಾಗುತ್ತೆ.ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳಾ..ನಿಜಾನಾ..?

ಟಿಪ್ಪು ಸುಲ್ತಾನ್ ವಿಚಾರ ಪಠ್ಯದಿಂದ ಕೈಬಿಡುವುದಕ್ಕಾಗಿ ಪಠ್ಯಪುಸ್ತಕ ಸಮಿತಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವರದಿ ಕೇಳಿದ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ನಿಜಾ ಇದ್ರೆ ಅದನ್ನೇ ಬದಲಾಯಿಸಿ ಬಿಡ್ತಾರಾ..ಇತಿಹಾಸ ತಿರುಚಬಾರದು. ಮಕ್ಕಳಿಗೆ ಕಲಿಸಬೇಕು, ಇತಿಹಾಸದಿಂದ ಅವರು ಪಾಠ ಕಲಿಬೇಕು. ಟಿಪ್ಪು ಮತಾಂಧರೆಂದು ಬಿಜೆಪಿಯವ್ರು ಕರೀತಾರೆ.. ಉಳಿದವರು ಯಾರಾದ್ರೂ ಕರೆದಿದ್ದಾರಾ..? ಬಿಜೆಪಿಯವರೇ ಮತಾಂಧರು ಎಂದರು.

ನೆರೆ ಸಂತ್ರಸ್ತರ ವಿಚಾರವಾಗಿ ಬಾಗಲಕೋಟೆಯಿಂದ ಪಾದಯಾತ್ರೆ ಇನ್ನು ಅಂತಿಮವಾಗಿಲ್ಲ. ಈ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT