ಬುಧವಾರ, ಏಪ್ರಿಲ್ 1, 2020
19 °C

ಕಂಬಳದ ಓಟಗಾರ ಶ್ರೀನಿವಾಸ ಗೌಡ ಮತ್ತೆರಡು ದಾಖಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಂಬಳದಲ್ಲಿ ‘ವೇಗದ ಓಟ’ದಿಂದ ಹೆಸರು ಮಾಡಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಹೊಸ ದಾಖಲೆ ಮಾಡಿದ್ದು, ಮತ್ತೊಂದು ದಾಖಲೆ ಸಮಬಲಗೊಳಿಸುವ ಹೊಸ್ತಿಲಲ್ಲಿದ್ದಾರೆ.

ಈ ಋತುವಿನ 13ನೇಯ, ಮಂಜೇಶ್ವರದ ಪೈವಳಿಕೆಯ ‘ಅಣ್ಣ–ತಮ್ಮ’ ಜೋಡುಕರೆ ಕಂಬಳ ಶನಿವಾರ ಆರಂಭಗೊಂಡಿದ್ದು, ಇಲ್ಲಿ ಕಂಬಳದ ಕರೆ(ಕಂಬಳ ಓಟದ ಟ್ರ್ಯಾಕ್)ಗಿಳಿಯುವ ಮೊದಲೇ ಶ್ರೀನಿವಾಸ ಗೌಡ ಅವರು ಒಂದೇ ಋತುವಿನ 12 ಕಂಬಳದಲ್ಲಿ 35 ಪದಕ ಪಡೆದ ದಾಖಲೆ ಮಾಡಿದ್ದಾರೆ. ವೇಣೂರಿನಲ್ಲಿ ಈಚೆಗೆ ನಡೆದ ಈ ಋತುವಿನ 12ನೇ ಕಂಬಳದಲ್ಲಿ ಈ ದಾಖಲೆ ಸೃಷ್ಟಿಯಾಗಿತ್ತು.

‘ಕಂಬಳ ಓಟಗಾರ ಹಕ್ಕೇರಿ ಸುರೇಶ್‌ ಶೆಟ್ಟಿ ಅವರು ಈ ಹಿಂದೆ ಒಂದೇ ಋತುವಿನ 17 ಕಂಬಳಗಳಿಂದ 32 ಪದಕ ಗೆದ್ದಿದ್ದರು’ ಎಂದು ಕಂಬಳ ಅಕಾಡೆಮಿ ಮತ್ತು ಸಮಿತಿಗಳ ಸದಸ್ಯರಾಗಿರುವ ಗುಣಪಾಲ ಕಡಂಬ ತಿಳಿಸಿದರು.

ಸಮಬಲ:

ಕಂಬಳದ ಹಗ್ಗ ಕಿರಿಯ ವಿಭಾಗದಲ್ಲಿ ಬೆಳವಾಯಿ ಸದಾನಂದ ಶೆಟ್ಟಿ ಅವರ ಕೋಣವನ್ನು ಓಡಿಸಿದ್ದ ನಕ್ರೆ ಜಯಕರ ಮಡಿವಾಳ  ನಿರಂತರವಾಗಿ 13 ಚಿನ್ನ ಗೆದ್ದಿರುವುದು ಇನ್ನೊಂದು ದಾಖಲೆಯಾಗಿದೆ.

ಇದೇ ವಿಭಾಗದಲ್ಲಿ ಶಕ್ತಿಪ್ರಸಾದ್‌ ಶೆಟ್ಟಿ ಅವರ ಕೋಣಗಳನ್ನು ಓಡಿಸುತ್ತಿರುವ ಶ್ರೀನಿವಾಸ ಗೌಡ, ಈ ಬಾರಿ ನಿರಂತರವಾಗಿ 12 ಚಿನ್ನಗಳನ್ನು ಗೆದ್ದಿದ್ದು, ಮಂಜೇಶ್ವರದಲ್ಲಿ ಈಗಾಗಲೇ ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಭಾನುವಾರ ನಸುಕಿನ ಜಾವ ಫೈನಲ್ ನಡೆಯುವ ನಿರೀಕ್ಷೆ ಇದೆ. ಈ ಋತುವಿನಲ್ಲಿ ಮಂಜೇಶ್ವರದ ಬಳಿಕ ಮತ್ತೆರಡು ಕಂಬಳಗಳು ನಡೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು