ಶನಿವಾರ, ಜನವರಿ 25, 2020
28 °C

ಹಾಲಿವುಡ್‌ನಲ್ಲಿ ಮಲೆನಾಡ ಪ್ರತಿಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಲೆನಾಡಿನ ಪ್ರತಿಭೆ ‘ಪೂರ್ವ’ ಹಾಲಿವುಡ್‌ನಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ.

ಮೊದಲಿ ನಿಂದಲೂ ಹಾಲಿವುಡ್ ಚಿತ್ರರಂಗದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ‘ದ ಬಿಗ್ ರಾಂಟ್’ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ವರ್ಷ ಜನವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಹಾಲಿವುಡ್‌ನ ಹಲವು ಕಿರುಚಿತ್ರಗಳು, ಜಾಹೀರಾತುಗಳಲ್ಲಿ ಅಭಿನಯಿಸಿದ ಅನುಭವ ಅವರಿಗಿದೆ.

ಇವರು ಶಿವಮೊಗ್ಗ ಗೋಪಾಳದ ಶಿವಕುಮಾರ್ ಹಾಗೂ ವೀಣಾ ದಂಪತಿಯ ಪುತ್ರ. 25ರ ಹರೆಯದ ಪೂರ್ವ ಟೆನಿಸ್ ಆಟಗಾರ. ಬೆಂಗಳೂರಿನಲ್ಲಿ ಕ್ರೀಡಾ ತರಬೇತಿ ಪಡೆಯುವಾಗ ಅಮೆರಿಕದ ವ್ಯಕ್ತಿಯೊಬ್ಬರ ಪರಿಚಯವಾಗಿ ಅಲ್ಲಿಗೆ ತೆರಳಿದ್ದರು. ಲಾಸ್ ಏಂಜಲೀಸ್‌ನಲ್ಲಿ ‘ಎಂಎಫ್‌ಎ ಇನ್ ಮಾಸ್ಟರ್ಸ್' ಕೋರ್ಸ್ ಪೂರ್ಣಗೊಳಿಸಿ, ಪ್ರಸ್ತುತ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. 

ಪ್ರತಿಕ್ರಿಯಿಸಿ (+)