ಬೆಂಗಳೂರು: ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಟಿ.ಬಿ.ನಾಗರಾಜ್, ಈಗ ಸಂಸದ ಬಿ.ಎನ್.ಬಚ್ಚೇಗೌಡ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಮಾಡಿ ಬಚ್ಚೇಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ. ‘ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪಕ್ಷದ ಮುಖಂಡರು ಸೂಚನೆ ನೀಡಿದ್ದರೂ ನನ್ನ ಪರವಾಗಿ ಪ್ರಚಾರ ಮಾಡಲಿಲ್ಲ. ಪುತ್ರ ಶರತ್ ಬಚ್ಚೇಗೌಡ ಅವರನ್ನು ಬೆಂಬಲಿಸುವಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲಹೆ, ಸೂಚನೆ ನೀಡಿರುವ ದಾಖಲೆ ನನ್ನ ಬಳಿ ಇದೆ’ ಎಂದು ದೂರಿನ ಪಟ್ಟಿಯನ್ನು ಮುಂದಿಟ್ಟರು ಎನ್ನಲಾಗಿದೆ.

‘ಒಂದು ವೇಳೆ ಸೋತರೆ ಅದಕ್ಕೆ ಬಚ್ಚೇಗೌಡ ಅವರೇ ನೇರ ಹೊಣೆ. ನನ್ನ ಮಾತು ಕೇಳದೆ ಚುನಾವಣೆಗೆ ಸ್ಪರ್ಧಿಸಿದ್ದಾನೆ.ಮಗನನ್ನು ಬೆಂಬಲಿಸುವುದಿಲ್ಲ ಎಂದು ಸುಳ್ಳು ಹೇಳಿಕೆ ನೀಡಿ, ನಾಟಕವಾಡಿ ನಮ್ಮನ್ನೆಲ್ಲ ನಂಬಿಸಿದರು. ಆದರೆ ಆಂತರಿಕವಾಗಿ ಪುತ್ರನ ಬೆಂಬಲಕ್ಕೆ ನಿಂತಿದ್ದರು. ಚುನಾವಣೆ ಸಮಯದಲ್ಲಿ ಅಪ್ಪ– ಮಗನಿಂದ ಸಾಕಷ್ಟು ತೊಂದರೆ, ಕಿರುಕುಳ ಅನುಭವಿಸಬೇಕಾಯಿತು. ಫಲಿತಾಂಶದ ನಂತರ ಎಲ್ಲವೂ ಜಗಜ್ಜಾಹೀರಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಫಲಿತಾಂಶ ವ್ಯತಿರಿಕ್ತವಾಗಿದ್ದರೆ ಏನೆಲ್ಲ ಪರಿಣಾಮ ಬೀರಬಹುದು ಎಂಬ ಬಗ್ಗೆ ಇಬ್ಬರ ನಡುವೆಯೂ ಚರ್ಚೆಗಳು ನಡೆದಿವೆ. ‘ಚುನಾವಣೆಯಲ್ಲಿ ಅನರ್ಹಗೊಂಡಿರುವ ಶಾಸಕರು ಹಿನ್ನಡೆ ಅನುಭವಿಸಿದರೆ ಅವರನ್ನು ಮುಂದೆ ಕೈಬಿಡದಂತೆ ಕೇಳಿಕೊಂಡಿದ್ದಾರೆ. ನನ್ನನ್ನೂ ದೂರತಳ್ಳಬಾರದು’ ಎಂದು ಅವರು ಮನವಿ ಮಾಡಿದ್ದಾರೆ. ‘ಏನೂ ಆಗುವುದಿಲ್ಲ. ಭರ್ಜರಿ ಪ್ರಚಾರ ಮಾಡಿದ್ದೇವೆ, ಗೆಲ್ಲುತ್ತೀರಿ’ ಎಂದು ಯಡಿಯೂರಪ್ಪ ಧೈರ್ಯ ತುಂಬಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.